ರಾಜಾಜಿನಗರ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧಿಸಲಿದ್ದಾರಾ ಈ ಪ್ರಭಾವಿ ನಾಯಕ…!!
ಕರ್ನಾಟಕ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಇದೀಗ ರಾಜಕೀಯ ವಲಯದಲ್ಲಿ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ರಾಜಕಾರಣದಲ್ಲಿ ಯಾವ ಕ್ಷಣ ಯಾವ ಸುದ್ಧಿ ಆಸ್ಪೋಟಿಸುತ್ತೋ ಹೇಳಲಾಗದು. ಈಗ ಬಂದಿರುವ ಬ್ರೇಕಿಂಗ್ ನ್ಯೂಸ್ ಸಹಾ ಅಷ್ಟೇ ಆಶ್ಚರ್ಯಕರವಾದ ವಿಷಯ.
ರಾಜಾಜಿನಗರ ಕ್ಷೇತ್ರದಿಂದ ಜೆಡಿಎಸ್ ನಿಂದ ಜೇಡರ ಹಳ್ಳಿ ಕೃಷ್ಣಪ್ಪ ಅಖಾಡಕ್ಕೆ..!!
ಜೇಡರ ಹಳ್ಳಿ ಕೃಷ್ಣಪ್ಪ ರಾಜಾಜಿನಗರ ಕ್ಷೇತ್ರದಲ್ಲಿ ಕ್ಯಾನ್ ವಾಸ್ ಆರಂಭಿಸಿದ್ದಾರೆ,ಅವರ ಹಳೆಯ ಸ್ನೇಹಿತರನ್ನೆಲ್ಲಾ ಮಾತನಾಡಿಸುತ್ತಾ ಬೆಂಬಲ ಕೊರುತ್ತಿದ್ದಾರೆ.ಕೃಷ್ಣಪ್ಪನವರಿಗೆ ರಾಜಾಜಿನಗರದಲ್ಲಿ ದೊಡ್ಡ ಟೀಮ್ ಇದೆ. ಕ್ರೀಡಾ ಪಟುಗಳಿಂದ ಹಿಡಿದು ಕಾರ್ಮಿಕವರ್ಗದವರೆಗೆ ಎಲ್ಲಾ ರೀತಿಯ ಜನರ ನೆಟ್ ವರ್ಕ್ ಅವರಿಗಿದೆ. ಎಪ್ರಿಲ್ 13ರಂದು ರಾತ್ರಿ ಮಹಾಲಕ್ಷಿಪುರ ಕ್ಷೇತ್ರದ ಕುರುಬರ ಹಳ್ಳಿ ವೃತ್ತದಲ್ಲಿ ಜೆಡಿಎಸ್ ನ ಬೃಹತ್ ವಿಕಾಸ ಪರ್ವದ ಸಮಾವೇಶವನ್ನ ಎರ್ಪಡಿಸಲಾಗಿತ್ತು. ಅಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಶಾಸಕ ಗೋಪಾಲಯ್ಯ ಮುಂತಾದವರೊಂದಿಗೆ ಜೇಡರ ಹಳ್ಳಿ ಕೃಷ್ಣಪ್ಪ ಸಹಾ ವೇದಿಕೆಯ ಮೇಲಿದ್ದರು. ಜೇಡರ ಹಳ್ಳಿ ಕೃಷ್ಣಪ್ಪ ಈಗಾಗಲ್ಲೇ ರಾಜಾಜಿನಗರ ಕ್ಷೇತ್ರದಲ್ಲಿ ಮತಯಾಚನೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments