ಚುನಾವಣಾ ಹಿನ್ನಲೆ ಕುರಿತು ಬಿಎಸ್ ವೈ ಗೆ ಟಾಂಗ್ ಕೊಟ್ಟ ಎಚ್ ಡಿಕೆ

14 Apr 2018 10:18 AM |
3266 Report

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೆತ್ರದ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮರ್ಸವಾಮಿ ಅವರು, ಆಸ್ಪತ್ರೆ ಖರ್ಚಿಗೆ ಮನೆ , ಒಡವೆ ಅಡಾ ಇಡ್ತೀರಿ. ಇಂತಹ ಸಮಸ್ಯೆಗಳು ನಿಮಗೆ ಬರೋದು ಬೇಡ. ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಕುಕ್ಕರ್ , ಮಿಕ್ಸಿ ಕೊಟ್ಟರು ಅಂತ ಮತ ಹಾಕಬೇಡಿ.ಯೋಚನೆ ಮಾಡಿ ಎಂದು ಹೇಳಿದ್ದಾರೆ.

ಯಡಿಯೂರಪ್ಪನವರು ಆಟೋದಲ್ಲಿ ಹೋಗಿ ಸಂವಾದ ನಡೆಸುತ್ತಾರೆ. ಈ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಗಮನಿಸಿದೆ. ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಆಟೋ ಡ್ರೈವರ್ ಗಳಿಗೆ ಮನೆ ಕಟ್ಟಿಕೊಡ್ತಾರಂತೆ. ಐದು ವರ್ಷ ಅಧಿಕಾರ ಇತ್ತಲ್ಲ.ಆಗ್ಯಾಕೆ ಯಡಿಯೂರಪ್ಪ ಆಟೋ ಡ್ರೈವರ್ ಗಳಿಗೆ ಮನೆ ಕಟ್ಟಿ ಕೊಡಲಿಲ್ಲ? ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಶೇಕಡಾ 60 ಪ್ರತಿಶತ ಕ್ಕಿಂತ ಹೆಚ್ಚಿನ ಜನ ಹಳ್ಳಿ ಪ್ರದೇಶ ಗಳಿಂದ ಬಂದಿದ್ದಾರೆ. ಬೆಂಗಳೂರು ನಗರದಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡಿ ಕುಟುಂಬ ಸಾಗಿಸುವುದು ಕಷ್ಟ ಎಂಬುವುದು ನನಗೆ ಗೊತ್ತಿದೆ. ಡಾ ಬಾಬಾಸಾಹೇಬ ಅಂಬೇಡ್ಕರ್ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಮತದಾನದ ಹಕ್ಕನ್ನು ನೀಡಿದ್ದಾರೆ. ಈ ಹಕ್ಕು ಕುಕ್ಕರ್ ಹಾಗೂ ಇನ್ನಿತರ ಆಮಿಷಗಳಿಗೆ ಮಾರಿಕೊಳ್ಳುವುದಕ್ಕಲ್ಲ. ಬೆಂಗಳೂರು ನಗರದಲ್ಲಿ ಯಾವುದೆ ಸಭೆ ಮಾಡಬೇಕಾದ್ರೆ ದುಡ್ಡು ಕೊಟ್ಟು ಜನರನ್ನು ಕರೆ ತರುವ ಕೆಟ್ಟ ಅಭ್ಯಾಸ ಮಾಡಲಾಗಿದೆ‌. ನಮ್ಮ ಪಕ್ಷದ ನಾಯಕರಿಗೆ ಹೇಳಿದ್ದೇನೆ. ಸಭೆ ಸಮಾರಂಭ ಮಾಡದೆ ಇದ್ರು ಪರವಾಗಿಲ್ಲ. ಈ ರೀತಿಯಾದ ಸಭೆ ಸಮಾರಂಭ ಮಾಡುವುದು ಬೇಡ ಎಂದಿದ್ದಾರೆ.

Edited By

Shruthi G

Reported By

hdk fans

Comments