ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ದೊಡ್ದಬಳ್ಳಾಪುರ ಘಟಕದ ಉಧ್ಘಾಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರಿಂದ







13-4-18 ಶುಕ್ರವಾರ ದೊಡ್ಡಬಳ್ಳಾಪುರ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಘಟಕ ಅದ್ಧೂರಿಯಾಗಿ ಉದ್ಘಾಟನೆಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಎಸ್. ಕುಮಾರಸ್ವಾಮಿಯವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ರಾಮಮೂರ್ತಿಯವರು, ದೇವರ ದಾಸಿಮಯ್ಯ ಮಿತ್ರ ಮಂಡಳಿಯ ಅಧ್ಯಕ್ಷರು ಮತ್ತು ಚೌಡರಾಜ್, ನೇಕಾರ ಮುಖಂಡರು, ಹಾಗೂ ಪತ್ರಕರ್ತರಾದ ರವಿಕಿರಣ್ ಮತ್ತು ಶ್ರೀಕಾಂತ್ ರವರು ಭಾಗವಹಿಸಿದ್ದರು, ಸಭೆಯಲ್ಲಿ ಅನೇಕ ರೀತಿಯ ನೇಕಾರರ ಪರ ಚಿಂತನ ಮಂಥನ ನಡೆಸಲಾಯಿತು, ದೊಡ್ಡಬಳ್ಳಾಪುರದಲ್ಲಿ ನೇಕಾರರಿಗೆ ಆಗಿರುವ ಅನ್ಯಾಯಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ ಇದುವರೆಗೂ ಯಾವುದೇ ಸಮಾಜದ ಮುಖಂಡರುಗಳು ಬಡ ನೇಕಾರರ ಉದ್ಧಾರ ಮಾಡಿದ ಉದಾಹರಣೆಗಳೇ ಇಲ್ಲ, ಸದಾ ಒಳಜಗಳ ಮತ್ತು ಒಳ ಒಪ್ಪಂದಕ್ಕೆ ಮಣಿದು ನೇಕಾರರ ಅಭಿವೃದ್ಧಿಗೆ ಯಾರೂ ಸಹ ಕಾಳಜಿ ವಹಿಸಿಲ್ಲ ಎನ್ನುವ ಅಭಿಪ್ರಾಯ ಏರ್ಪಟ್ಟಿತು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರು ನೇಕಾರರ ಎಲ್ಲ ಸಮಸ್ಯೆಗಳಿಗೆ ನಮ್ಮ ಕರ್ನಾಟಕ ನೇಕಾರ ರಕ್ಷಣಾ ವೇದಿಕೆ ಮೂಲಕ ದೃಢ ಸಂಕಲ್ಪದಿಂದ ಹೋರಾಟ ಮಾಡೋಣವೆಂದು ಸಭೆಯಲ್ಲಿ ತಿಳಿಸಿದರು. ನಂತರ ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಆದೇಶ ಪತ್ರ ಮತ್ತು ಗುರುತಿನ ಚೀಟಿಯನ್ನು ನೀಡಲಾಯಿತು. ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಯಿತು.
ದೊಡ್ಡಬಳ್ಳಾಪುರ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು :- ಅಧ್ಯಕ್ಷರು ಎಚ್.ವಿ. ಕೃಷ್ಣಕುಮಾರ್, ಉಪಾಧ್ಯಕ್ಷರು ನಾಗರಾಜ್ ಎಸ್.ಎನ್. ಕಾರ್ಯಾಧ್ಯಕ್ಷರು ಜಿ.ಆರ್.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್, ಕಾರ್ಯದರ್ಶಿ ಬಿ.ಸಿ. ಲಕ್ಷ್ಮೀನಾರಾಯಣ್, ಸಹ ಕಾರ್ಯದರ್ಶಿ ಕೆ.ಎನ್. ಕೃಷ್ಣಮೂರ್ತಿ. ಎಸ್. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಶ್ವರಿ. ವತ್ಸಲಾ, ಎಸ್.ಎನ್.ಮೋಹನ್ ಕೆ.ಎಸ್.ಶಂಕರ್, ಆರ್ ಮಂಜುನಾಥ್, ಡಿ. ಬಾಲಕೃಷ್ಣ, ಎನ್. ನವೀನ್ ಕುಮಾರ್, ಜಂಟಿ ಕಾರ್ಯದರ್ಶಿ ಬಿ.ಎಸ್. ವೇಣು ನೇಮಕವಾಗಿದ್ದಾರೆ.
Comments