ಜೆ.ನರಸಿಂಹಸ್ವಾಮಿಯವರಿಗೆ ಬಂಡಾಯದ ಬಿಸಿ?

ದೊಡ್ಡಬಳ್ಳಾಪುರದ ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ ತಾನೇ ಚುನಾವಣಾ ಅಭ್ಯರ್ಥಿ ಎಂದು ಪ್ರಚಾರ ಆರಂಭಿಸಿರುವ ನರಸಿಂಹಸ್ವಾಮಿಯವರಿಗೆ ಟಿಕೆಟ್ ನೀಡಿದರೆ ಮೂಲ ಕಾರ್ಯಕರ್ತರು ಬೆಂಬಲ ನೀಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಜೋ.ನಾ. ಮಲ್ಲಿಕಾರ್ಜುನ್ ಹೇಳಿದರು. ಸದ್ಯ ತಾಲ್ಲೂಕಿನಿಂದ ನರಸಿಂಹಸ್ವಾಮಿ, ಅನಿಲ್ ಕುಮಾರ್ ಗೌಡ, ರವಿ ಮಾವಿನಕುಂಟೆ ಹೆಸರು ಪಟ್ಟಿಯಲ್ಲಿದೆ ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ ಆದರೆ ನರಸಿಂಹಸ್ವಾಮಿಯವರಿಗೆ ನೀಡಬಾರದು ಎಂದು ಆಗ್ರಹಿಸಿದರು. ಜಿ.ಪಂ. ತಾ.ಪಂ. ಹಾಗೂ ನಗರಸಭೆಗಳಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಾ ಪಕ್ಷ ವಿರೋಧಿ ಕಾರ್ಯಗಳಲ್ಲಿ ನರಸಿಂಹಸ್ವಾಮಿ ತೊಡಗಿಸಿಕೊಂಡಿದ್ದಾರೆ, ಚುನಾವಣೆ ಹತ್ತಿರ ಬರುತ್ತಿದಂತೆ ಜೆಡಿಎಸ್, ಕಾಂಗ್ರೆಸ್ ಬಾಗಿಲು ತಟ್ಟಿದಾರೆ ಅಲ್ಲಿ ಟಿಕೆಟ್ ಗಿಟ್ಟುವುದಿಲ್ಲ ಎಂದು ಬಿಜೆಪಿಯಲ್ಲಿ ಉಳಿದಿದ್ದಾರೆ ಎಂದು ಟೀಕಿಸಿದರು. ಪಕ್ಷದ ಮೂಲ ಸಿಧ್ದಾಂತಗಳಿಗೆ ಬೆಲೆ ನೀಡದೆ, ಕಾರ್ಯಕರ್ತರನ್ನು ಸಂಘಟಿಸದೆ ಇತರೆ ಪಕ್ಷಗಳ ಮುಖಂಡರೊಂದಿಗೆ ಸಂಪರ್ಕ ಹೊಂದಿರುವ ನರಸಿಂಹಸ್ವಾಮಿಯವರ ನಡೆಯಿಂದ ಕಾರ್ಯಕರ್ತರಲ್ಲಿ ಬೇಸರ ಮೂಡಿದೆ ಎಂದರು.
Comments