ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಕೊರಟಗೆರೆಗೆ ಪಿಕ್ಸ್
ಕೊರಟಗೆರೆ ಏ.:- ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಸ್ಪಧರ್ಿಸುವುದಿಲ್ಲ ಬೇರೆ ಕ್ಷೇತ್ರಕ್ಕೆ ಹೋಗುತ್ತಾರೆ ಎನ್ನುವ ವಿಚಾರಗಳು ಮಾಧ್ಯಮದಲ್ಲಿ ದೊಡ್ಡ ಸುದ್ದಿಯನ್ನು ಮಾಡಿತ್ತು.
ಆದರೆ ಕಳೆದ ಎರಡು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಕೊರಟಗೆರೆ ಕ್ಷೇತ್ರದಿಂದ ಏ.20ರಂದು ನಾಮಪತ್ರ ಸಲ್ಲಿಸಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪಧರ್ಿಸುತ್ತಾರೆ ಎನ್ನುವುದು ಕೆಲವು ವರ್ಷಗಳಿಂದ ಖಚಿತವಾಗಿತ್ತು, ಆದರೆ ಕೆಲವು ದಿನಗಳ ಹಿಂದೆ ಡಾ. ಜಿ ಪರಮೇಶ್ವರ್ ಕೊರಟಗೆರೆ ಮತ್ತು ಬೆಂಗಳೂರಿನ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪಧರ್ಿಸುತ್ತಾರೆ ಇದು ಹೈಕಮಾಂಡ್ ಸೂಚನೆ ಎನ್ನುವ ವರದಿಗೆ ಪೂರಕವಾಗಿದ್ದ ಎಲ್ಲಾ ವದಂತಿಗಳನ್ನು ದೂರಮಾಡಿ ಪರಮೇಶ್ವರ್ ಕೊರಟಗೆರೆ ಕ್ಷೇತ್ರದಲ್ಲಿಯೇ ಸ್ಪಧರ್ಿಸದ್ದಾರೆ ಎನ್ನುವ ಮಾಹಿತಿಯನ್ನು ಪಡೆದಿರುವ ಕಾರ್ಯಕರ್ತರು ಇದಕ್ಕೆ ಸಾಮಾಜಿಕ ಜಾಲ ತಾಣವನ್ನು ವೇಧಿಕೆ ಮಾಡಿಕೊಂಡು ಮಿಂಚಿನಂತೆ ಎಲ್ಲಾ ಗ್ರೂಪ್ ಗಳಿಗೆ ಶೇರ್ ಮಾಡಿ ವದಂತಿಗೆ ತೆರೆ ಎಳೆದಿದ್ದಾರೆ. ಒಟ್ಟಾರೆ ಡಾ. ಜಿ ಪರಮೇಶ್ವರ್ ಕೊರಟಗೆರೆ ವಿಧಾನಸಭಾ ಮಾತ್ರದಿಂದ ಸ್ಫಧರ್ಿಸುವುದು ಖಚಿತವಾಗಿದೆ.
Comments