ನೇತ್ರದಾನ @ 1000 ಸಹಸ್ರ ಮುಟ್ಟಿದ ದೊಡ್ಡಬಳ್ಳಾಪುರದ ಕಣ್ಣಪ್ಪಗಳು



ದೊಡ್ಡಬಳ್ಳಾಪುರದ ಮಾರುತಿನಗರದ ನಿವಾಸಿ, ದಿವಂಗತ ನಾಗರಾಜರಾವ್ ರವರ ಮಗನಾದ ಮೋಹನ್ ಕುಮಾರ್ (34ವರ್ಷ) ರವರು ರಸ್ತೆ ಅಪಘಾತದಲ್ಲಿ ವಿಧಿವಶರಾಗಿ, 10/04/2018 ರಂದು ಅವರ ಕಣ್ಣುಗಳನ್ನು ಅವರ ಕುಟುಂಬದವರು ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆಯನ್ನು ಮೆರೆದಿದ್ದಾರೆ. ಇದು ದೊಡ್ಡಬಳ್ಳಾಪುರದ ಡಾ.ರಾಜ್ ಕುಮಾರ್ ನೇತ್ರಸಂಗ್ರಹಣಾ ಕೇಂದ್ರದ 1000 ನೇ ನೇತ್ರದಾನ. ಒಂದು ಸಾವಿರ ನೇತ್ರಗಳನ್ನು ದಾನ ಮಾಡಿದ ದಾನಿಗಳು, ಅವರ ಬಂಧುಗಳು, ನೇತ್ರದಾನಕ್ಕೆ ಪ್ರೇರೇಪಿಸಿದ ಆತ್ಮೀಯರು ಹಾಗೂ ನೇತ್ರದಾನಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಸಹೃದಯರಿಗೂ ವಂದನೆಗಳು, ಅಭಿನಂದನೆಗಳು. ದೊಡ್ಡಬಳ್ಳಾಪುರದಲ್ಲಿ ನೇತ್ರದಾನಕ್ಕೆ ಸಂಪರ್ಕಿಸಿ - 9742202650, 9036797177, 9902884008, 9844179963.
Comments