ಅರಸಾಪುರ ಗ್ರಾಪಂ ವ್ಯಾಪ್ತಿಯ 14 ಗ್ರಾಮಗಳಲ್ಲಿ ಮನೆಮನೆಗೆ ಕುಮಾರಣ್ಣ

12 Apr 2018 7:24 PM |
499 Report

ಕೊರಟಗೆರೆ ಏ. : ಪಕ್ಷ ಈ ಬಾರಿ ಯಾವುದೇ ಸ್ವತಂತ್ರ ಪಕ್ಷವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಪಿ.ಆರ್ ಸುಧಾಕರ್ ಲಾಲ್ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಗುರುವಾರ 14 ಗ್ರಾಮಗಳಲ್ಲಿ ಮನೆ ಮನೆಗೆ ಕುಮಾರಣ್ಣ ಮತ್ತು ಜೆಡಿಎಸ್ ಪಕ್ಷದ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

 
     2018ರ ವಿಧಾನಸಭಾ ಚುನಾವಣೆ ಕೇವಲ ಸುಧಾಕರಲಾಲ್ ಗೆಲುವಿನ ಚುನಾವಣೆಯಲ್ಲ. ರಾಜ್ಯದ ರೈತರ ಭವಿಷ್ಯದ ಚುನಾವಣೆ ಪ್ರಾದೇಶಿಕ ಸಮಸ್ಯೆಗಳ ಅರಿವಿರು ಪಕ್ಷವನ್ನೇ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
     ಕೊರಟಗೆರೆ ಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಮನೆಮನೆಗೆ ಕುಮಾರಣ್ಣ ಉದ್ಘಾಟನೆಗೆ ಬಂದ ದೇವೆಗೌಡರಿಗೆ ನೀಡಿದ ಗೌರವ ಮತ್ತು ವಿಕಾಸಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ ಕುಮಾರಣ್ಣನಿಗೆ           ಕಾರ್ಯಕರ್ತರು ತೋರಿಸಿದ ಪ್ರೀತಿವಿಶ್ವಾಸವೇ ಮತ್ತೋಮ್ಮೆ ಕೊರಟಗೆರ ಜೆಡಿಎಸ್ ಭದ್ರಕೋಟೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
     ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿ, ಕಾಶಪುರ, ಹೊಸಪಾಳ್ಯ, ಅಗ್ರಹಾರ, ಮಾದೇನಹಳ್ಳಿ, ಹಕ್ಕಿಪಿಕ್ಕಿಕಾಲೋನಿ, ಅರಸಾಪುರ, ಕಳ್ಳಿಪಾಳ್ಯ ಗ್ರಾಮದಲ್ಲಿ ಶಾಸಕ ಪಿ.ಆರ್.ಸುಧಾಕರಲಾಲ್ ಜೆಡಿಎಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದರು. ಪ್ರಚಾರದ ವೇಳೆಯಲ್ಲಿ ಕಾಂಗ್ರೇಸ್ ಪಕ್ಷ ತೊರೆದ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸುಧಾಕರಲಾಲ್ ಸಮ್ಮುಖದಲ್ಲಿ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯದಶರ್ಿ ಹೆಚ್.ಕೆ ಮಹಾಲಿಂಗಪ್ಪ, ತಾಲೂಕು ಜೆಡಿಎಸ್ ಉಪಾಧ್ಯಕ್ಷ ಜಿ.ಎಂ ಕಾಮರಾಜು, ಸಿದ್ದಮಲ್ಲಪ್ಪ, ಯುವ ಅಧ್ಯಕ್ಷ ಕೋಡ್ಲಹಳ್ಳಿ ವೆಂಕಟೇಶ್, ಪಕ್ಷದ ವಕ್ತಾರ ಟಿ. ಲಕ್ಷ್ಮೀಶ್, ಜಿಪಂ ಸದಸ್ಯ ಲಕ್ಷ್ಮೀನರಸೇಗೌಡ, ತಾಪಂ ಸದಸ್ಯರಾದ ಕೆಂಪಣ್ಣ, ಮಾಜಿ ತಾಪಂ ಸದಸ್ಯ ಎಲ್.ವಿ.ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಹನುಮಕ್ಕರಂಗಯ್ಯ, ಸದಸ್ಯ ವೆಂಕಟರೆಡ್ಡಿ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments