ಕಾಂಗ್ರೇಸ್ ತೊರೆದು ಬಿಜೆಪಿಗೆ ಸೇರ್ಪಡೆ
ಕೊರಟಗೆರೆ ಏ:- ಬಿಜೆಪಿ ಪಕ್ಷದ ತತ್ವ ಮತ್ತು ಸಿದ್ದಾಂತಗಳಿಂದ ಪ್ರಭಾವಿತರಾಗಿ ಬಹುತೇಕ ತಾಲೂಕಿನ ಎಲ್ಲಾ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷರೂ ಆದ ಜಿ.ಪಂ ಸದಸ್ಯ ವೈ.ಹೆಚ್ ಹುಚ್ಚಯ್ಯ ತಿಳಿಸಿದರು.
ತಾಲೂಕಿನ ದೊಡ್ಡಸಾಗ್ಗೆರೆ ಮತ್ತು ಚಿಕ್ಕಸಾಗ್ಗೆರೆ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ದೊಡ್ಡಸಾಗ್ಗೆರೆ ಮಾಜಿ ಗ್ರಾ.ಪಂ ಅಧ್ಯಕ್ಷರುಗಳಾದ ಕಾಂತರಾಜು, ಶ್ರೀನಿವಾಸ್ ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ರಾಷ್ಟ್ರದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಯಡ್ಯೂರಪ್ಪರ ಅಲೆ ಹೆಚ್ಚು ಕೆಲಸ ಮಾಡುತ್ತಿದ್ದು ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿಯೂ ಈ ಬಾರಿ ಬಿಜೆಪಿಯ ಬಗ್ಗೆ ಜನರು ಹೆಚ್ಚಿನ ಒಲವನ್ನು ತೋರುತ್ತಿದ್ದು ಬಿಜೆಪಿ ಕ್ಷೇತ್ರದಲ್ಲಿ ಜಯಗಳಿಸಲಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಸತ್ಯವತಿ, ರಘು, ಮೆಡಿಕಲ್ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
Comments