ಕುತೂಹಲ ಕೆರಳಿಸಿರುವ ಆರ್.ಆರ್. ನಗರದ ಜೆಡಿಎಸ್ ಅಭ್ಯರ್ಥಿಯ ಸುಳಿವು...!!
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರ್.ಆರ್. ನಗರದಲ್ಲಿ ರಾಜಕೀಯದ ಕಾವು ಹೆಚ್ಚುತ್ತಿದೆ.ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆ ಇದೀಗ ಮೂಡಿದ್ದು, ಡಿಕೆ ರವಿ ಮಾವ ಹನುಮಂತ ರಾಯಪ್ಪಗೆ ಆರ್.ಆರ್. ನಗರ ಟಿಕೆಟ್ ಖಚಿತವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಏ.13 ರಂದು ನಡೆಯಲಿರುವ ಸಮಾವೇಶದಲ್ಲಿ ಈ ಸಂಬಂಧ ಘೋಷಣೆ ಮಾಡುವ ಸಾದ್ಯತೆ ಇದೆ. ಎಸ್ ಎಂ ಕೃಷ್ಣ ಬೆಂಬಲಿಗರರಾಗಿರುವ ಹನುಮಂತರಾಯಪ್ಪ ಇದುವರೆಗೆ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಬಿಜೆಪಿಯಲ್ಲಿಯೇ ಅಸಮಾಧಾನ ಪರಿಸ್ಥಿತಿ ಇದೆ. ಹಾಗಾಗಿ ಜೆಡಿಎಸ್ ಸೇರ್ಪಡೆ ಯಾಗಲು ಚಿಂತನೆ ನಡೆಸಿದ್ದು, ಪ್ರಜ್ವಲ್ ಜೊತೆ ಈಗಾಗಲೇ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ಗೆ ಟಿಕೆಟ್ ತಪ್ಪಿದ್ದರಿಂದ ಹನುಮಂತ ರಾಯಪ್ಪಗೆ ಟಿಕೆಟ್ ದೊರಕುವ ಸಾದ್ಯತೆ ಗಳೂ ಇವೆ. ಹನುಮಂತ ರಾಯಪ್ಪ ಜೆಡಿಎಸ್ ಅಭ್ಯರ್ಥಿ ಆದರೆ ಪ್ರಜ್ವಲ್ ಕೂಡಾ ಬೆಂಬಲಿಸುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Comments