ಸಿದ್ದರಾಮಯ್ಯ ನವರ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಜೆಡಿಎಸ್ ಮುಖಂಡ ಟಿ.ಎ.ಶರವಣ
ತುಮಕೂರಿನ ಮಧುಗಿರಿಯಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಅವರು ಟಿ.ಎ.ಶರವಣ ವೃಶ್ಚಿಕ ರಾಶಿ ಅನುರಾಧ ನಕ್ಷತ್ರದಲ್ಲಿ ಹುಟ್ಟಿರುವ ಸಿಎಂ ಸಿದ್ದರಾಮಯ್ಯಗೆ ಸಾಡೇ ಸಾತ್ ಶನಿಕಾಟ ಕಾಡ್ತಿದೆ ಎಂದು ಭವಿಷ್ಯ ನುಡಿದರು.
ಸಾಡೇ ಸಾತ್ ಶನಿ ಕಾಟದಿಂದ ಸಿಎಂ ಸೋಲ್ತಾರೆ ಅಂತ ಭವಿಷ್ಯ ನುಡಿದರು. ಸಿದ್ದರಾಮಯ್ಯ ಸಿಎಂ ಆಗಿ ಪದವಿ ಸ್ವೀಕರಿಸುವಾಗ ಶನಿ ದಸೆ ಶುರುವಾಗಿತ್ತು. ಇದೀಗ ಏಳೂವರೆ ಶನಿಕಾಟ ನಡೆಯುತ್ತಿದೆ. ಹೀಗಾಗಿ ಶನಿಯೇ ಸಿಎಂ ಬಾಯಲ್ಲಿ ದುರಹಂಕಾರದ ಮಾತುಗಳನ್ನಾಡಿಸುತ್ತಿದ್ದಾನೆ. ಸಿಎಂಗೆ ಜನರೇ ಸೋಲಿನ ಭಾಗ್ಯ ಕೊಡ್ತಾರೆ, ಬಾದಾಮಿಗೆ ಹೋಗಿ ಸ್ಪರ್ಧಿಸಿದ್ರು ಸಿಎಂಗೆ ಜನ ತಕ್ಕಪಾಠ ಕಲಿಸ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಟಿ.ಎ.ಶರವಣ ವಾಗ್ದಾಳಿ ನಡೆಸಿದ್ದಾರೆ.
Comments