'ಕಮಲ' ಬಿಟ್ಟು 'ತೆನೆ' ಹೊರಲಿದ್ದಾರಾ ಈ ಪ್ರಭಾವಿ ನಾಯಕ..!!
ಸಿಎಂ ಸಿದ್ದರಾಮಯ್ಯನವರ ನಡೆಗೆ ಬೇಸತ್ತು, ಕೈ ತೊರೆದು ಕಮಲ ಮುಡಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಇದೀಗ ಬಿಜೆಪಿ ತೊರೆಯಲು ಮುಂದಾಗಿದ್ದಾರಾ ? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ.
ಶ್ರೀನಿವಾಸ ಪ್ರಸಾದ್ ಬಿಜೆಪಿ ಬಿಡುತ್ತಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಅತ್ತ ಎಸ್. ಎಂ ಕೃಷ್ಣ ಬಿಜೆಪಿ ಬಿಡುವ ಬಗ್ಗೆ ಚರ್ಚೆ ಆರಂಭವಾದ ಬೆನ್ನಲ್ಲೇ, ಇತ್ತ ಶ್ರೀನಿವಾಸ ಪ್ರಸಾದ್ ಅವರು ಕೂಡ ಬಿಜೆಪಿ ಬಿಡುವ ಕುರಿತು ಚರ್ಚೆ ಆರಂಭಿಸಿದ್ದಾರೆ. ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಅವರು ಇಂದು ಮೈಸೂರಿನಲ್ಲಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಇದೇ ವೇಳೆ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಧುಬಂಗಾರಪ್ಪ ಶ್ರೀನಿವಾಸ್ ಪ್ರಸಾದ್ ನನ್ನ ತಂದೆಯ ಸ್ನೇಹತರಾಗಿದ್ದರು. ನಾನು ಶಾಸಕನಾಗಿದ್ದಾಗನ ಬೆನ್ನುತಟ್ಟಿ ಕೆಲಸ ಮಾಡಲು ಹುರಿದುಂಬಿಸಿದ್ದರು. ಈ ಹಿನ್ನೆಲೆಯಲ್ಲಿ ಸೌಹಾರ್ದವಾಗಿ ಇಂದು ಅವರ ಭೇಟಿ ಮಾಡಿದ್ದೇನೆ. ರಾಜಕೀಯವಾಗಿ ಯಾವುದೇ ಚರ್ಚೆ ಆಗಿಲ್ಲ. ಅವರು ಬೇರೆ ಪಕ್ಕದಲ್ಲಿದ್ದಾಗ ನಾವು ಅವರ ಸಹಕಾರ ಕೇಳುವುದು ತಪ್ಪಾಗುತ್ತದೆ. ಅವರ ಆರ್ಶಿವಾದ ಪಡೆಯಲು ಬಂದಿದ್ದೇನೆ ಅಷ್ಟೇ. ಈ ಭಾಗದ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರನ್ನ ಪಕ್ಷಕ್ಕೆ ಆಹ್ವಾನ ಮಾಡುವಂತ ಅಥವ ನಮಗೆ ಬೆಂಬಲ ಕೊಡಿ ಅನ್ನುವ ಯಾವುದೇ ಚರ್ಚೆ ಆಗಿಲ್ಲ ಸ್ಪಷ್ಟಪಡಿಸಿದರು.
Comments