ವಿಶೇಷ ವಾಹನದೊಂದಿಗೆ ಚುನಾವಣಾ ಅಖಾಡಕ್ಕಿಳಿದ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇಂದಿನಿಂದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ಪ್ರಚಾರಕ್ಕಾಗಿ ಈಗಾಗಲೇ ವಿಶೇಷ ವಾಹನ ರೆಡಿ ಮಾಡಿಸಿದ್ದಾರೆ. ರೇವಣ್ಣ ಬೆಂಬಲಿಗರೊಬ್ಬರು ಪ್ರಚಾರಕ್ಕಾಗಿ ವಿಶೇಷ ವಾಹನ ರೆಡಿ ಮಾಡಿಕೊಟ್ಟಿದ್ದು, ಅದಕ್ಕೆ ಸೋಮವಾರ ಪೂಜೆ ಮಾಡಿದ್ದಾರೆ.
ಈ ವೇಳೆ ತಾಯಿ ಭವಾನಿ ರೇವಣ್ಣ ಕೂಡ ಸಾಥ್ ನೀಡಿದ್ದಾರೆ. ಪುತ್ರನ ಪ್ರಚಾರ ವಾಹನವನ್ನು ಖುದ್ದು ಪರಿಶೀಲಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಚಾರ ವಾಹನದಲ್ಲಿ ದೇವೇಗೌಡ, ತಂದೆ ರೇವಣ್ಣ, ಚಿಕ್ಕಪ್ಪ ಹೆಚ್.ಡಿ ಕುಮಾರಸ್ವಾಮಿ ಅವರ ಫೋಟೋಗಳನ್ನು ಬಳಸಲಾಗಿದೆ.
Comments