ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ಜೆಡಿಎಸ್ ಗೆ ಲಾಭ...!!



ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ರಾಜ್ಯ ರಾಜಕೀಯ ರಂಗೇರುತ್ತಿದೆ. ಈ ನಡುವೆ ಪಕ್ಷಾಂತರ ಪರ್ವ ಪ್ರಾರಂಭವಾಗಿದ್ದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಆದಮೇಲಂತು ಬಿಜೆಪಿಗೆ ಬಂಡಾಯ ಎಂಬುದು ಬಿಸಿ ತುಪ್ಪವಾಗಿದೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಅನೇಕರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಲು ಸಜ್ಜಾದರೆ ಮತ್ತಷ್ಟು ನಾಯಕರು ಬೇರೆ ಬೇರೆ ಪಕ್ಷಗಳ ಬಾಗಿಲಲ್ಲಿ ನಿಂತಿದ್ದು, ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಜೆಡಿಎಸ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷೆಯಾಗಿದ್ದ ಎನ್ ಆರ್ ರಮೇಶ್ ಅವರಿಗೆ ಟಿಕೆಟ್ ಕೈ ತಪ್ಪಿದ ಕಾರಣದಿಂದ ಅವರು ಬಿಜೆಪಿ ವಿರುದ್ಧ ಪ್ರೆಸ್ ಮೀಟ್ ಮಾಡುವ ಮೂಲಕ ತಮ್ಮ ಪಕ್ಷದ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ಹಗರಣಗಳನ್ನು ಬಯಲಿಗೆಳೆಯುವಲ್ಲಿ ನಿಸ್ಸೀಮರಾಗಿದ್ದ ಇವರು ಬಿಜೆಪಿ ವಿರುದ್ಧವೇ ಆರೋಪ ಮಾಡಿದ್ದಾರೆ. ಇನ್ನು ತಮಗೆ ಟಿಕೆಟ್ ಕೈ ತಪ್ಪುವುದಕ್ಕೆ ಮುಖ್ಯಕಾರಣ ಎಂದರೆ ಅದು ಆರ್. ಅಶೊಕ್ ಮತ್ತು ಅನಂತ್ ಕುಮಾರ್ ಎಂದು ನೇರ ಆರೋಪ ಮಾಡಿರುವ ಅವರು ಬಿಜೆಪಿಯಲ್ಲಿ ನೀಡಿದ್ದ ನಗರ ವಕ್ತಾರ ಜವಾಬ್ದಾರಿಗೆ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬೇಸತ್ತಿರುವ ಎನ್ ಆರ್ ರಮೇಶ್ ಜೆಡಿಎಸ್ ನಾಯಕರ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಎನ್ ಆರ್ ರಮೇಶ್ ಜೆಡಿಎಸ್ಗೆ ಬಂದರೆ ಚಿಕ್ಕಪೇಟೆಯಲ್ಲೇ ಟಿಕೆಟ್ ಗ್ಯಾರಂಟಿಯಾಗಿದ್ದು, ಸದ್ಯ ಚಿಕ್ಕಪೇಟೆಯಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್ ಪಕ್ಷವಿದೆ. ಎನ್ ಆರ್ ರಮೇಶ್ರನ್ನು ಜೆಡಿಎಸ್ಗೆ ಸೇರಿಸಿಕೊಳ್ಳಲು ನಾಯಕರೂ ಕೂಡ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಉಂಟಾದ ಅಸಮಾಧಾನದ ಲಾಭವನ್ನು ಪಡೆಲು ಜೆಡಿಎಸ್ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ರಮೇಶ್ ಜೊತೆ ಮಾತುಕತೆ ಮುಂದುವರೆಸಲು ಜೆಡಿಎಸ್ ನಾಯಕರು ಆಸಕ್ತಿ ತೋರಿದ್ದು, ನಿನ್ನೆ ರಾತ್ರಿಯೇ ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
Comments