ಸಿದ್ದರಾಮಯ್ಯ ನವರ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಪ್ರಧಾನಿ ದೇವೇಗೌಡ್ರು
ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಅವರು, ಸಿದ್ದರಾಮಯ್ಯ ನಿನ್ನನ್ನು ಡಿಸಿಎಂ ಮಾಡಿದ್ದು ಯಾರಪ್ಪ, ನಾನು ಅಧಿಕಾರಕ್ಕಾಗಿ ಅಂಟಿ ಕೂತಿಲ್ಲ, ನಾನು ಮಾಡಿರುವುದು ನಿನಗೆ ತಿಳಿಯದೇ ಹೋದ್ರೆ ನೀನೊಬ್ಬ ಕೃತಘ್ನ ಎಂದು ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡ, ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡ ಮತ್ತು ಕುಮಾರಸ್ವಾಮಿ ಅವಕಾಶವಾದಿಗಳು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ್ರು, ಸಿಎಂ ಸ್ಥಾನ ಸಿಗಲಿಲ್ಲ ಅಂತ ಕಾಂಗ್ರೆಸ್ ಮನೆ ಕದ ಬಡಿದವರು ಯಾರು? ಮುಂದಿನ ದಿನಗಳಲ್ಲಿ ಮಾತನಾಡುವಾಗ ಎಚ್ಚರವಿರಲಿ, ಉತ್ತರ ಕೊಡುವ ಕಾಲ ಹತ್ತಿರ ಬರಲಿದೆ ಎಂದರು. ನೀನು ಯಾರನ್ನು ಮೆಚ್ಚಿಸಲು ಮಾತನಾಡಿದೆ ಎಂದು ಗೊತ್ತಿದೆ, ನಮಗೆ ಕಾಂಗ್ರೆಸ್ ನಾಯಕರ ಯಾವುದೇ ಅನುಕಂಪ ಬೇಕಾಗಿಲ್ಲ. ನಿಮಗೆ ಅದೇ ಕೊನೆಯ ಭಾಷಣ ಎಂದು ಒಂದು ಕಾಲದಲ್ಲಿ ತಮ್ಮ ಶಿಷ್ಯನಾಗಿದ್ದ ಸಿದ್ದರಾಮಯ್ಯ ನವರಿಗೆ ತಿರುಗೇಟು ನೀಡಿದರು.
Comments