ಮಹಿಳಾ ಸಮಾಜದಲ್ಲಿ ಹತ್ತು ದಿನಗಳ ಮಕ್ಕಳ ವ್ಯಕ್ತಿ ವಿಕಸನ ಶಿಬಿರ






ಮಕ್ಕಳ ಮನೋಲ್ಲಾಸಕ್ಕಾಗಿ 5ರಿಂದ 15ನೇ ವಯಸ್ಸಿನ ಮಕ್ಕಳಿಗಾಗಿ ಮಹಿಳಾ ಸಮಾಜದಲ್ಲಿ ವ್ಯಕ್ತಿ ವಿಕಸನ ಶಿಬಿರವನ್ನು ದಿನಾಂಕ 11-4-2018 ರಿಂದ 20-4-2018 ರವರೆಗೆ ಹಮ್ಮಿಕೊಂಡಿದ್ದಾರೆ, ಆಸಕ್ತ ಪೋಷಕರು ತಮ್ಮ ಮಕ್ಕಳ ಸ್ವವಿವರಗಳೊಂದಿಗೆ ನೊಂದಾಯಿಸಿಕೊಳ್ಳತಕ್ಕದ್ದು, ಪ್ರವೇಶ ಧನ ರೂ.800/- ಮಾತ್ರ. ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಶಿಬಿರ ಇರುತ್ತದೆ, ಚಿತ್ರಕಲೆ, ಸಂಗೀತ, ಯೋಗಾಭ್ಯಾಸ,ಕ್ರಾಫ್ಟ್. ಒಳಾಂಗಣ ಮತ್ತು ಹೊರಾಂಗಣ ಆಟಗಳು, ನಾಟಕ ಕಲಿಸಲಾಗುವುದು, ಒಂದು ದಿನದ ಚಾರಣ ಪ್ರವಾಸ ಇರುತ್ತದೆ. ಸಾಮಾಜಿಕ ತಿಳುವಳಿಕೆ, ಆರೋಗ್ಯ, ನೀತಿ ಮತ್ತು ಶಿಸ್ತಿಗೆ ಸಂಬಂಧಿಸಿದಂತೆ ವಿಶೇಷ ಚಟುವಟಿಕೆಗಲನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಹಣ್ಣಿನ ರಸ, ಮಧ್ಯಾನ್ಹ ಉಪಹಾರದ ವ್ಯವಸ್ಥೆ ಇರುತ್ತದೆ. ಮುಕ್ತಾಯ ಸಮಾರಂಭದಲ್ಲಿ ಕಾರ್ಯಚಟುವಟಿಕೆಗಳ ಪ್ರದರ್ಶನ ಇರುತ್ತದೆ. ಭಾಗವಹಿಸುವ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತರು 9480515797, 9019323140, 9620575956, 9480479130 ಸಂಪರ್ಕಿಸುವುದು.
Comments