ದೇವೇಗೌಡರ ಮಕ್ಕಳನ್ನು ಸೋಲಿಸಲು ಹೆಣೆದಿದ್ದ ಸಿದ್ದು ಪ್ಲಾನ್ ಫ್ಲಾಪ್...!!
ಜೆಡಿಎಸ್ ಪಕ್ಷವನ್ನು ಕಟ್ಟಿ ಹಾಕಲು ಸಿಎಂ ಸಿದ್ದರಾಮಯ್ಯನವರು ತಮ್ಮದೇ ಆದ ಚಕ್ರವ್ಯೂಹವನ್ನು ಹೆಣೆದಿದ್ದರು ಆದರೆ ಅವರ ಪ್ಲಾನ್ ಫ್ಲಾಪ್ ಆಗಿದೆ. ಸ್ವತಹ ಸಿದ್ದರಾಮಯ್ಯನವರೇ ಮುತುವರ್ಜಿ ವಹಿಸಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರನ್ನು ಹೊಳೆನರಸೀಪುರದಲ್ಲಿ ಕಣಕ್ಕಿಳಿಸಲು ತಯಾರಿ ಮಾಡಿದ್ದರು.
ಕೆಲ ದಿನಗಳ ಹಿಂದೆ ನೇರವಾಗಿ ಮಂಜೇ ಗೌಡರಿಗೆ ಕರೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ‘‘ರಾಜೀನಾಮೆ ನೀಡಿ, ಚುನಾವಣೆ ತಯಾರಿ ಮಾಡಿ ಎಂದರೆ ಏನು ಮಾಡುತ್ತಿದ್ದೀರಿ’’ ಎಂದು ಕೇಳಿದ್ದ ಸಿದ್ದರಾಮಯ್ಯ ಸ್ಥಳಿಯ ಮುಖಂಡರೊಂದಿಗೆ ಮಾತನಾಡಿ ‘‘ ಈ ಬಾರಿ ಹೊಳೆ ನರಸೀಪುರಕ್ಕೆ ಮಂಜೇಗೌಡನೇ ಅಭ್ಯರ್ಥಿ ಎಲ್ಲರೂ ಅವರಿಗೆ ಕೆಲಸ ಮಾಡಿ. ಸಾಕು ಇಷ್ಟು ದಿನ ದೇವೇಗೌಡರ ಮಕ್ಕಳನ್ನು ಗೆಲ್ಲಿಸಿದ್ದು’’ ಎಂದು ಹೇಳಿದ ಆಡಿಯೋ ಸಖತ್ ವೈರಲ್ ಆಗಿತ್ತು. ಆದರೆ ಸಿದ್ದರಾಮಯ್ಯನವರ ಈ ಎಲ್ಲಾ ಪ್ಲಾನ್ ಈಗ ಫ್ಲಾಪ್ ಆಗಿದೆ. ಅದೇನು ಅಂತೀರಾ, ಹಾಗಾದ್ರೆ ಮುಂದೆ ಓದಿ… ಮಂಜೇಗೌಡರು ಚುನಾವಣೆಗೆ ನಿಲ್ಲುವುದಕ್ಕೆ ತಾಂತ್ರಿಕ ತೊಡಕು ಎದುರಾಗಿದ್ದು ಒಂದು ವಾರದ ಹಿಂದೆ ನೀಡಿದ್ದ ರಾಜೀನಾಮೆ ಇನ್ನು ಅಂಗೀಕಾರವಾಗದ ಕಾರಣ ಮಂಜೇಗೌಡರು ಚುನಾವಣೆ ನಿಲ್ಲುವುದರ ಬಗ್ಗೆ ತುಂಬಾ ಗೊಂದಲಗಳು ಪ್ರಾರಂಭವಾಗಿದೆ. ಮಂಜೇಗೌಡರ ಮೇಲೆ ಲೋಕಾಯುಕ್ತದಲ್ಲಿ ಈಗಾಗಲೇ ಕೇಸ್ ಇರುವ ಕಾರಣದಿಂದ ಇವರು ರಾಜೀನಾಮೆಯನ್ನು ಅಂಗೀಕಾರ ಮಾಡಬಾರದು ಎಂದು ಕಾನೂನು ಇಲಾಖೆ ಸಲಹೆ ನೀಡದೆ. ಅದೇ ಕಾರಣದಿಂದ ಇವರು ರಾಜೀನಾಮೆ ನೀಡಿ ಒಂದು ವಾರದ ಮೇಲಾದರೂ ಇನ್ನು ಅಂಗೀಕಾರವಾಗಿಲ್ಲ. ಕೆಲವೇ ದಿನಗಳಲ್ಲಿ ಚುನಾವಣೆ ನಾಮಪತ್ರ ಸಲ್ಲಿಸಬೇಕು, ಅಷ್ಟರಲ್ಲಿ ರಾಜೀನಾಮೆ ಅಂಗೀಕಾರವಾಗಲಿಲ್ಲ ಎಂದರೆ ಮಂಜೇಗೌಡರು ರಾಜಕೀಯ ಎಂಟ್ರಿ ಕನಸಾಗಿಯೇ ಉಳಿಯಲಿದೆ. ಹಾಸನ ಅದರಲ್ಲೂ ಹೊಳೆ ನರಸೀಪುರ ಜೆಡಿಎಸ್ ಭದ್ರಕೋಟೆ, ಇಲ್ಲಿ ಯಾರೇ ಬಂದರೂ ಜೆಡಿಎಸ್ ಅನ್ನು ಸೋಲಿಸುವುದಕ್ಕೆ ಸಾಧ್ಯವೇ ಇಲ್ಲಾ ಎನ್ನುವ ಮಾತುಗಳಿವೆ. ಅದರ ಹಿನ್ನೆಲೆಯಲ್ಲಿ ನೋಡುವುದಾದರೆ, ಕಾಂಗ್ರೆಸ್ನ ತಂತ್ರವೇ ಬುಡಮೇಲಾಗಿದ್ದು ಚುನಾವಣೆಗೂ ಮುನ್ನವೇ ಜೆಡಿಎಸ್ ಗೆದ್ದಂತೆ ಆಗಿದೆ.
Comments