ಜೆಡಿಎಸ್ ಬತ್ತಳಿಕೆಗೆ ಬೀಳಲಿದ್ದಾರಾ ಈ ಪ್ರಭಾವಿ ನಾಯಕ..!
ಮುಂಬರುವ ವಿಭಾನಸಭಾ ಚುನಾವಣೆ ಸಿದ್ದರಾಮಯ್ಯನವರನ್ನು ಸೋಲಿಸಲು ಎಲ್ಲಾ ರೀತಿಯಲ್ಲೂ ಸಿದ್ದವಾಗಿರುವ ಜೆ.ಡಿ.ಎಸ್ ಇದೀಗ ತನ್ನ ಬತ್ತಳಿಕೆಯನ್ನು ಮತ್ತೊಂದು ಅಸ್ತ್ರವನ್ನು ಸೇರಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್ ನ ಮಹತ್ವಾಕಾಂಕ್ಷೆಗೆ ಪೂರಕವಾಗಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಪಕ್ಷ ಕೂಡಾ ತೆರೆಮರೆಯ ಹಿಂದೆ ಕೈ ಜೋಡಿಸುವ ಎಲ್ಲಾ ಕ್ಷಣಗಳು ಕೂಡ ಕಂಡುಬರುತ್ತಿವೆ.
ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರುವುದರಿಂದ ಸಿದ್ದರಾಮಯ್ಯ, ತಮ್ಮ ಮಗನಾದ ಯತೀಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣ್ಣಕ್ಕೆ ಇಳಿಸಲು ಮತ್ತು ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿರುವುದು ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಈಗ ಪ್ರತಿನಿಧಿಸುತ್ತಿರುವವರು ಜೆಡಿಎಸ್ ನ ಜಿ.ಟಿ. ದೇವೇಗೌಡ. ಕಳೆದ ಬಾರಿ ಅವರ ಎದುರು ಹೇಳಿಕೊಳ್ಳುವಂತಹ ಅಭ್ಯರ್ಥಿ ಇರಲಿಲ್ಲ ಅನ್ನುವುದೇನೋ ನಿಜವಾದರೂ ಕೂಡ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಎಲ್ಲ ತಂತ್ರಗಳನ್ನು ಬಳಸುವುದು ಸಹಜವಾದ್ದರಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯುವುದಂತೂ ನಿಶ್ಚಿತವಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚಿರುವುದರಿಂದ ಸಹಾಯಕ ಸೈನ್ಯ ಪದ್ಧತಿಯ ಶೈಲಿಯಲ್ಲಿ ಜಿ.ಟಿ. ದೇವೇಗೌಡರ ಗೆಲುವಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಇತ್ತಿಚಿಗೆ ಜಾತಿ ಆಧಾರಿತ ಮತದಾರರ ವಿಂಗಡೆಯಾಗುತ್ತಿರುವು ನಿಮಗೆಲ್ಲಾ ಗೊತ್ತಿರುವ ವಿಷಯವೆ.ಹಾಗಾಗಿ ಲಿಂಗಾಯಿತ ಮತಗಳನ್ನು ಒಟ್ಟಾರೆಯಾಗಿ ಜೋಡಿಸಬೇಕೆಂದು ಜೆಡಿಎಸ್ ಪಕ್ಷಕ್ಕೆ ಮಾಜಿ ಪೊಲೀಸ್ ಅಧಿಕಾರಿ ಎಲ್.ರೇವಣಸಿದ್ದಯ್ಯ ಕರೆ ತರುವ ಸಾಧ್ಯತೆಗಳಿವೆ.
ರೇವಣಸಿದ್ದಯ್ಯ ಅವರನ್ನು ಪಕ್ಷಕ್ಕೆ ಸೆಳೆಯಲು ಈಗಾಗಲೆ ಎಲ್ಲಾ ರೀತಿಯ ಸಿದ್ದತೆಗಳು ಕೂಡ ನಡೆಯಲಿವೆ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಕ್ಷಣವೇ ರೇವಣಸಿದ್ಧಯ್ಯ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ. ಈ ವಿಷಯದಲ್ಲಿ ಕೆಲ ಸುತ್ತುಗಳ ಮಾತುಕತೆಯೂ ಆಗಿದೆ. ಒಂದು ವೇಳೆ ಈ ಮಾತುಕತೆ ಯಶಸ್ವಿಯಾಗಿ ರೇವಣಾಸ್ತ್ರ ಜೆಡಿಎಸ್ ಬತ್ತಳಿಕೆಗೆ ಸೇರಿದರೆ ಒಕ್ಕಲಿಗ ಮತಗಳ ಜತೆ, ಲಿಂಗಾಯತ ಮತಗಳನ್ನೂ ದೊಡ್ಡ ಮಟ್ಟದಲ್ಲಿ ಪಡೆಯಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರವಾಗಿದೆ.ಈ ಲೆಕ್ಕಾಚಾರ ಜೆಡಿಎಸ್ ನ ಕೈ ಹಿಡಿಯಲಿದೆಯಾ ಅನ್ನೋದನ್ನ ಕಾದುನೋಡಬೇಕಿದೆ.
Comments