ದೊಡ್ಡಬಳ್ಳಾಪುರದ ಜನ ಭಿಕ್ಷೆ ನೀಡುವವರೇ ಹೊರತು ಭಿಕ್ಷೆ ಬೇಡುವವರಲ್ಲ ಹ್ಯಾಟ್ರಿಕ್ ಹೀರೋ ಜೆ.ನರಸಿಂಹಸ್ವಾಮಿ

06 Apr 2018 3:36 PM |
489 Report

ನಗರದ ರುಮಾಲೆ ಛತ್ರದ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಶ್ರೀ ಜೆ. ನರಸಿಂಹಸ್ವಾಮಿ ಅಪಾರ ಸಂಖ್ಯೆಯ ತಮ್ಮ ಸಂಗಡಿಗರೊಂದಿಗೆ ಇಂದಿನಿಂದ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದರು. ವರದಿಗಾರದೊಂದಿಗೆ ಮಾತನಾಡುತ್ತಾ ಹಾಲಿ ಶಾಸಕರು ದೊಡ್ಡಬಳ್ಳಾಪುರದ ಜನರು ಭಿಕ್ಷುಕರು ಎಂದ ಹೇಳಿದ ಮಾತನ್ನು ಖಂಡಿಸಿದರು. ತಮ್ಮ ತಂದೆ ಜಾಲಪ್ಪನವರು ಶಾಸಕರಾಗಿದ್ದಾಗ ಜಕ್ಕಲಮಡಗು ನೀರಿನ ಯೋಜನೆ ಪ್ರಾರಂಭಿಸಿದ್ದರು ತದನಂತರ ನಾನು ಶಾಸಕನಾದ ಮೇಲೆ ಬಾಕಿ ಕೆಲಸಗಳನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೇಳಿ ಹಣ ಬಿಡುಗಡೆ ಮಾಡಿಸಿ ಯೋಜನೆ ಪೂರೈಸಿದೆ, ಉದ್ಘಾಟನೆ ಮಾಡುವಷ್ಟರಲ್ಲಿ ಚುನಾವಣೆ ಬಂದು ದುರದೃಷ್ಟವಶಾತ್ ಸೋತು ಮನೆಯಲ್ಲಿ ಉಳಿಯಬೇಕಾಯಿತು. ನಂತರ ಬಂದ ಶಾಸಕರು ಬರೀ ನಲ್ಲಿತಿರುವಿ ನಾನು ನೀರು ತಂದೆ ಅಂಥಾ ಹೇಳಿಕೊಂಡು ತಿರುಗುತ್ತಿದ್ದಾರೆ, ನಗರದ ಜನಕ್ಕೆ ಗೊತ್ತು ಯಾರು ಯಾವ ಕೆಲಸ ಮಾಡಿದ್ದಾರೆ ಅಂತ ಎಂದು ಹೇಳಿದರು. ಇಂದಿನ ಪ್ರಚಾರದಲ್ಲಿ ತಾಲ್ಲೂಕಿನ ಎಲ್ಲಾ ಪ್ರಮುಖ ಬಿಜೆಪಿ ನಾಯಕರು ನಗರಸಭಾ ಸದಸ್ಯರಾದ ಮುದ್ದಪ್ಪ, ಶಿವಶಂಕರ್, ಚಂದ್ರಶೇಖರ್ ಹಾಜರಿದ್ದರು ಜೊತೆಯಲ್ಲಿ ಪುಷ್ಪಾಶಿವಶಂಕರ್, ಉಮಾ ಮಹೇಶ್ವರಿ, ವತ್ಸಲ,ಗಿರಿಜ, ನಗರ ಬಿಜೆಪಿ ಅಧ್ಯಕ್ಷ ರಂಗರಾಜು, ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಿ ಹಿತೈಷಿಗಳು ಭಾಗವಹಿಸಿದ್ದರು.

Edited By

Ramesh

Reported By

Ramesh

Comments