ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದುಗೆ ಬಿಗ್ ಶಾಕ್ ಕೊಟ್ಟ ಜೆಡಿಎಸ್..!!
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದೆ. ಸಿದ್ದರಾಮಯ್ಯಗೆ ಸೋಲಿನ ಭಯ ಗೊತ್ತಿದ್ದರೂ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಟಾಂಗ್ ನೀಡಿದ್ದಾರೆ.
ಚಾಮುಂಡೇಶ್ವರಿ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತಿ ಸದ್ಯಸರಾಗಿರುವ ಗೋವಿಂದ, ಪೆದ್ದಹನುಮಯ್ಯ, ವೆಂಕಟೇಶ್ ಸೇರಿ ಹಲವು ಮುಖಂಡರು ಜಿ.ಟಿ.ದೇವೇಗೌಡ ಅವರ ಜೊತೆ ಅಧಿಕೃತವಾಗಿ ಇಂದು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಈ ಬಾರಿ ವರುಣಾದಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಸಿ.ಎಂ ಸಿದ್ದರಾಮಯ್ಯವರಿಗೆ ಇದೊಂದು ದೊಡ್ಡ ಪ್ರಮಾಣದಲ್ಲಿ ಆಘಾತವಾಗಿದೆ ಅಂತ ರಾಜಕೀಯ ಮುಖಂಡರು ಅಭಿಪ್ರಾಯ ವ್ಯಕ್ತಪಡಿಪಡಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪ್ರಚಾರ ನಡೆಸಿದ ಸಿದ್ದರಾಮುಯ್ಯಗೆ ಹಳ್ಳಿಗಳಿಗೆ ಹೋದ ಮೇಲೆ ಗ್ರೌಂಡ್ ರಿಯಾಲಿಟಿ ಗೊತ್ತಾಗಿದೆ. ದುಡ್ಡು ಕೊಟ್ಟು ಒಕ್ಕಲಿಗರನ್ನ ಸಭೆ ಕರೆತರುವಂತೆ ಹೇಳಿದ್ದಾರೆ. ನಿನ್ನೆ ಸತ್ಯನಾರಾಯಣ್ ಮನೆಯಲ್ಲಿ ಹಣ ಹಂಚಲಾಗಿದೆ ಎಂದು ಆರೋಪಿಸಿದರು. 25 ಲಕ್ಷ ಹಣ ಖರ್ಚು ಮಾಡಿ ಒಕ್ಕಲಿಗರನ್ನು ಕರೆತರುತ್ತಿದ್ದಾರೆ. ನಾವು ಯಾರಿಗೂ ಹಣ ನೀಡುತ್ತಿಲ್ಲ. ತಾವಾಗಿಯೇ ಜೆಡಿಎಸ್ಗೆ ಬರುತ್ತಿದ್ದಾರೆ. 20 ವರ್ಷಗಳಿಂದ ಸಿದ್ದರಾಮಯ್ಯರನ್ನು ಒಕ್ಕಲಿಗ ವಿರೋಧಿ ಎಂದವರು ಈಗ ಸಿದ್ದರಾಮಯ್ಯ ಅವರ ಜೊತೆಯಿದ್ದಾರೆ. ಇವರೆಲ್ಲಾ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಾರೆ. ಸಿದ್ದರಾಮಯ್ಯ ತಮ್ಮ ಸಮುದಾಯವನ್ನು ಮಾತ್ರ ಬೆಳೆಸಿದರು. ಡಿ.ಸಾಲುಂಡಿಯವರು ಮಾತ್ರ ಅವರ ಜೊತೆ ಇದ್ದಾರೆ. ಈ ಬಾರಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲು ಖಚಿತ ಎಂದು ವಾಗ್ದಾಳಿ ನಡೆಸಿದರು.
Comments