ಶಿಗ್ಗಾವಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದ ಕುಮಾರಣ್ಣ...!!

ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಸಮಾವೇಶ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಜನರು ಕುಡಿಯೋ ಮದ್ಯದಿಂದ ಸರ್ಕಾರ ವಸೂಲಿ ಮಾಡೋ ದುಡ್ಡಿನಿಂದ ಉಚಿತ ಅಕ್ಕಿ ಕೊಡ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯನ್ನು ಟೀಕಿಸಿದರು.
ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಮೂಲಕ ಉಚಿತ ಅಕ್ಕಿ ಕೊಡ್ತಿರೋದು ಕ್ವಾರ್ಟರ್ ಬಾಟಲ್ ದುಡ್ಡಿನಿಂದ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಾಲ್ಕು ಜನರು ಇರೋ ಒಂದು ಕುಟುಂಬಕ್ಕೆ ಅಕ್ಕಿ ನೀಡಲು ಸಿದ್ದರಾಮಯ್ಯ ಸರ್ಕಾರ ತಿಂಗಳಿಗೆ 84ರೂ. ಖರ್ಚು ಮಾಡ್ತಿದೆ. ಆದ್ರೆ ಕುಟುಂಬದ ಯಾವುದೋ ಒಬ್ರು ಕುಡಿಯೋ ಮದ್ಯದಿಂದ ವಸೂಲಿ ಮಾಡ್ತಿರೋದು ಸಾವಿರಾರು ರುಪಾಯಿ. ಹೀಗಾಗಿ ಉಚಿತ ಅಕ್ಕಿ ಕೊಡ್ತಿರೋದು, ಹಸಿವು ಮುಕ್ತ ರಾಜ್ಯ ಅನ್ನೋದು ನಿಮ್ಮ ದುಡ್ಡಿನಿಂದ ಮಾಡ್ತಿರೋದು. ಅದು ನಿಮ್ಮ ಕುಟುಂಬದಲ್ಲಿನ ಸದಸ್ಯರು ಕುಡಿಯೋ ಮದ್ಯದಿಂದ ಅಂತಾ ಹೇಳಿದರು. 1983ರಲ್ಲಿ ಅಂದಿನ ಸರ್ಕಾರ ಒಂದು ರೂಪಾಯಿಗೆ ಅಕ್ಕಿ ಕೊಡ್ತಿತ್ತು. ಅದೇ ಈಗ ಉಚಿತ ಅಕ್ಕಿ ಆಗಿದೆ. ಅದೇನು ಸಿದ್ದರಾಮಯ್ಯ ಸಿದ್ದರಾಮನಹುಂಡಿಯಲ್ಲಿ ಬೆಳೆದು ಕೊಡ್ತಿರೋದಲ್ಲ ಎಂದು ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಶಿಗ್ಗಾಂವಿ ಕ್ಷೇತ್ರಕ್ಕೆ ಅಶೋಕ ಬೇವಿನಮರದ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.
Comments