ಸಿಎಂ, ಅನ್ಸಾರಿ ಯವರನ್ನು ಮಣಿಸಲು ದೇವೇಗೌಡರ ಬಿಗ್ ಸ್ಕೆಚ್… ಏನು ಗೊತ್ತಾ?
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ರಾಜಕೀಯ ರಂಗೇರುತ್ತಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಸಮುದಾಯದ ಮತಗಳ ಬೇಟೆಯಾಡಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಬಿಗ್ ಸ್ಕೆಚ್ ಹಾಕಿದ್ದಾರೆ ಎನ್ನಲಾಗ್ತಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಮಾಜಿ ಎಂಎಲ್‍ಸಿ ಕರಿಯಣ್ಣ ಸಂಗಟಿ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿವೆ. ಹಾಲುಮತ ಸಮುದಾಯದ ಕರಿಯಣ್ಣ ಸ್ಪರ್ಧಿಸಿದರೆ ಕಾಂಗ್ರೆಸ್‍ಗೆ ದಕ್ಕ ಬೇಕಿದ್ದ ಕುರುಬ ಸಮುದಾಯದ ಮತಗಳು ಕರಿಯಣ್ಣರ ಪಾಲಾಗಲಿವೆ. ಜೆಡಿಎಸ್ ಪಕ್ಷದಲ್ಲಿ ರಾಜಕೀಯ ಅಸ್ತಿತ್ವ ಕಂಡು ಕಾಂಗ್ರೆಸ್‌ಗೆ ಹಾರುತ್ತಿರುವ ಶಾಸಕ ಇಕ್ಬಾಲ್ ಅನ್ಸಾರಿ ಅವರನ್ನು ರಾಜಕೀಯವಾಗಿ ಕಟ್ಟಿಹಾಕಬೇಕು ಎಂದು ದೇವೇಗೌಡರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂಬ ಗುಸುಗುಸು ತಾಲೂಕಿನಲ್ಲಿ ಜೋರಾಗಿದೆ. ಕರಿಯಣ್ಣರನ್ನು ಅಭ್ಯರ್ಥಿಯನ್ನಾಗಿಸುವ ಮೂಲಕ ಸಿಎಂ ಸಿದ್ದರಾಮಯ್ಯರ ಸಮುದಾಯದ ಮತಗಳನ್ನು ಬೇಟೆಯಾಡಿದರೆ ಇತ್ತ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಶಾಸಕ ಅನ್ಸಾರಿಗೆ ದಕ್ಕ ಬೇಕಿರುವ ದೊಡ್ಡ ಪ್ರಮಾಣದ ಮತಗಳು ಕೈತಪ್ಪಲಿವೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಹೀಗಾಗಲೇ ಗಂಗಾವತಿ ವಿಧಾನಸಭಾ ಕ್ಷೇತ್ರದ ಜನತೆಯ ಕೆಂಗಣ್ಣಿಗೆ ಶಾಸಕ ಇಕ್ಬಾಲ್ ಅನ್ಸಾರಿ ಗುರಿಯಾಗಿದ್ದು, ಈ ಬಾರಿ ಅನ್ಸಾರಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್ ಬಹುಮತ ಗಳಿಸಿ ಕ್ಷೇವನ್ನು ವಶಕ್ಕೆ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Comments