ದಲಿತರು ಎಚ್ಚರದಿಂದ ಮತ ಚಲಾಯಿಸಬೇಕು

05 Apr 2018 10:47 PM |
722 Report

ಕೊರಟಗೆರೆ ಏ.:- ಬಾಬುಜಗಜೀವನ್ ರಾಮ್ ಇಡೀ ದೇಶ ನೆನಪಿನಲ್ಲಿ ಇಡಬೇಕಾದಂತಹ ಮಹಾನ್ ಚೇತನ ಎಂದು ಕೋಡಿಹಳ್ಳಿ ಮಠದ ಪೀಠಾಧ್ಯಕ ಶ್ರೀ ಷಡಕ್ಷರಿಮುನಿ ಸ್ವಾಮಿಜೀಯವರು ತಿಳಸಿದರು. ಪಟ್ಟಣದ ಅಂಬೇಡ್ಕರ್ ಭವನದಿಂದ ಬಾಬುಜಗಜೀವನ್ ರಾಮ್ ಭಾವಚಿತ್ರವನ್ನು ಬೆಳ್ಳಿರಥದೊಂದಿಗೆ ಪ್ರಮುಖ ಬೀದಿಗಳಲ್ಲಿ ಡೋಲು ಕುಣಿತ, ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.


    ಡಾ.ಬಿ.ಅಂಬೇಡ್ಕರ್ ಮೃತರಾದ ಸಂದರರ್ಭದಲ್ಲಿ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಯಾರು ಮುಂದೆ ಬರಲಿಲ್ಲ ಮಾದಿಗ ಸಮಾಜದಲ್ಲಿ ಹುಟ್ಟಿದಂತ ಬಾಬುಜಗಜೀವನ್ ರಾಮ್ರವರು ಜಾತಿ ಮತ ಲೆಕ್ಕಿಸದೇ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನ ತಂದು ಅಂತ್ಯಕ್ರಿಯೆ ಮಾಡಿದ ಮಹನ್ ವ್ಯಕ್ತಿ ನಮ್ಮ ಬಾಬುಜಗಜೀವನ್ ರಾಮ್ರವರು ಎಂದು ಹೇಳಿದರು.
      ಡಾ. ಬಾಬುಜಗಜೀವನ್ ರಾಮ್ರವರು ಬರೀ ರಾಜಕಾರಣಿ ಅಲ್ಲ ಮಾದಿಗ ಸಮಾಜದ ಕಣ್ಣು ಎನ್ನಬಹುದು ಅವರ ಅಧಿಕಾರ ಅವಧಿಯಲ್ಲಿ ತಂದಂಹ ಯೋಜನೆಗಳು ಸಮಗ್ರ್ರ ಬಡತನ ನಿರ್ಮೂಲನೆಗಾಗಿ ಹೋರಾಡಿ  ಯಾವುದೇ ಧರ್ಮದವರು ಕೊಡ ಬಡತನದಿಂದ ಇರಕೊಡದು ಎಂದು ಪಣತೊಟ್ಟವರು, ಮಾದಿಗ ಜನಾಂನದ ರಾಷ್ಠ ಮಟ್ಟದಲ್ಲಿ ಧೀಮಂತ ನಾಯಕ ಎಂದರು.
    ಸಮಾಜದ ಮುಖಂಡ ವಾಲೆಚಂದ್ರಯ್ಯ ಮಾತನಾಡಿ ನಮ್ಮ ಜನಾಂಗ ಇನ್ನೂ ಹಿಂದೆ ಉಳಿದಿದ್ದು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಅಂಬೇಡ್ಕರ್ ಮತ್ತು ಬಾಬುಜಗಜೀವನ್ ರಾಮ್ರವರು ಆದರ್ಶಗಳನ್ನ ಮೈಗೂಡಿಸಿಕೊಂಡು ದೇಶಕ್ಕೆ ನಮ್ಮ ಸಮಾಜಕ್ಕೆ ಒಳ್ಳೆ ಹೆಸರು ತರುವಂತ ವ್ಯಕ್ತಿಗಳಾಗಿ ಬೆಳೆಯಬೇಕು. ದಲಿತರಿಗೆ ಕೃಷಿ ಭೂಮಿಯನ್ನ ಕೊಡಿಸಲು ಉಳುವವನೆ ಭೂ ಒಡೆಯ ಎಂಬ ನಿಯಮವನ್ನ ತಂದಿದರು ಎಂದು ಹೇಳಿದರು.
    ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ರಾಮ್ರ ಮಾಜಿ ಉಪ ಪ್ರಧಾನಿಯಾಗಿ ನಮ್ಮ ಸಮುದಾಯಕ್ಕೆ ಕೀರ್ತಿಯನ್ನು  ತಂದವರು ಆಡು ಮುಟ್ಟದ ಸೋಪ್ಪಿಲ್ಲ ಬಾಬುಜಗಜೀವನ್ ರಾಮ್ರವರು ಮುಟ್ಟದ ಖಾತೆ ಇಲ್ಲ ಈ ದೇಶದ ಸ್ವಾತಂತ್ರ ಭಾರತದಲ್ಲಿ ಹೆಚ್ಚು ಖಾತೆಗಳನ್ನ ದಕ್ಷ ಪ್ರಾಮಾಣಿಕತೆ ಉತ್ತಮ ಗುಣಮಟ್ಟದ ಆಡಳಿತ ನೀಡಿದ ಕೀರ್ತಿಗೆ ಏಕೈಕ ವ್ಯಕ್ತಿತ್ವ ಬಾಬೂಜಿ ಅವರದು ಎಂದು ತಿಳಿಸಿದರು.
ಒಕ್ಕೂಟದ ಸಂಚಾಲಕ ವೆಂಕಟೇಶ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಶೋಷಿತ ವರ್ಗಗಳ ಸಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದಂತಹ ಜಗತ್ತು ಕಂಡ ಮಹಾನ್ ಮಾನವತಾವಾದಿಗಳು ಬಾಬು ಜಗಜೀವನ್ರಾಂ ರವರು ಉಪ ಪ್ರಧಾನಿಯಾಗಿದ್ದ ಕಾಲದಲ್ಲೂ ಸಹ ಶೋಷಣೆಗೆ ಒಳಗಾದ ದಲಿತರ ಪರಿಸ್ಥಿತಿಯನ್ನು ಅನುಭವಿಸಿದರು, ಆದರೂ ಸಹ ಅವರು ತಮ್ಮ ಹೋರಾಟ ದಲಿತರ ಉದ್ದಾರಕ್ಕೆ ಹಗಲು ರಾತ್ರಿ ಶ್ರಮಿಸಿದವರು ಎಂದು ತಿಳಿಸಿದರು.

 

ದಲಿತರು ಎಚ್ಚರದಿಂದ ಮತ ಚಲಾಯಿಸಿ:-

     ಯಾವುದೇ ಆಮಿಸಗಳಿಗೆ ಮಾರು ಹೋಗಬೇಡಿ... ಸಂಮಿದಾನ ಬದ್ದವಾಗಿ ದೊರೆಯಬೇಕಾಗಿರುವಂತಹ ಹಕ್ಕುಗಳನ್ನು ಗಳಿಸಲು ಎಲ್ಲರೂ ತಪ್ಪದೇ ಮತ ಚಲಾಯಿಸಿ... ಯಾವುದೇ ಪಕ್ಷಕ್ಕೆ ಜೋತುಬೀಳದೆ ನಮ್ಮ ಕಷ್ಟಗಳನ್ನು ನಿವಾರಿಸುವಂತಹ ವ್ಯಕ್ತಿಗೆ ಶಕ್ತಿಯನ್ನು ನೀಡುವ ರೀತಿ, ಉತ್ತಮ ಸಮಾಜದ ನಿರ್ಮಾಣಕ್ಕೆ ಪಣತೊಟ್ಟಿರುವಂತಹ ವ್ಯಕ್ತಿಗಳ ಪರವಾಗಿ ಮತಚಲಾಯಿಸಿ ಎಂದು ಮಾದಿಗ ದಂಡೂರದ ಜಿಲ್ಲಾ ಯುವ ಅಧ್ಯಕ್ಷ ಜೆಟ್ಟಿ ಅಗ್ರಹಾರ ನಾಗರಾಜು ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ದಲಿತ ಸಾಹಿತಿ ಕೆ.ಬಿಸಿದ್ದಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ ಮಾಜಿ ಶಾಸಕ ಗಂಗಹನುಮಯ್ಯ, ಲಿಡ್ಕರ್ ನಿರ್ದೇಶಕ ನರಸಿಂಹಮೂರ್ತಿ, ಎಪಿಎಂಸಿ ಸದಸ್ಯ ಜಯರಾಮ್, ಮಾದಿಗ ದಂಡೋರದ ಯುವ ಸೇನೆ ಜಿಲ್ಲಾಧ್ಯಕ್ಷ ಜಟ್ಟಿ ಅಗ್ರಹಾರ ನಾಗರಾಜು, ತಾಲೂಕು ಕರವೇ ಅಧ್ಯಕ್ಷ ಕೆ.ಎನ್ ನಟರಾಜು ಮುಖಂಡರಾದ ಗಂಗಾಧರ್, ಚಿಕ್ಕಣ್ಣ, ಅನಂದ, ತಿಮ್ಮರಾಜು, ನರಸಿಂಹಮೂರ್ತಿ, ವೀರಕ್ಯಾತರಾಯ, ಗೋವಿಂದರಾಜು, ಕೆ. ರಾಘವೇಂದ್ರ, ಲಕ್ಷ್ಮೀಕಾಂತ, ಗಂಗಹನುಮಯ್ಯ, ತೀತಾ ರಾಮಣ್ಣ, ಶಿವಕುಮಾರ್, ದೊಡ್ಡಯ್ಯ, ಸೇರಿದಂತೆ ಇತರರು ಇದ್ದರು.
(ಚಿತ್ರ ಇದೆ)  

 

 

Edited By

Raghavendra D.M

Reported By

Raghavendra D.M

Comments