ಜಿ.ಪಂ ಮಾಜಿ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೇಸ್ ಗೆ ಸೇರ್ಪಡೆಗೊಂಡ ಗ್ರಾ.ಪಂ ಅದ್ಯಕ್ಷರು, ಸದಸ್ಯರು

ಕೊರಟಗೆರೆ ಏ.:- ತಾಲೂಕಿನ ಕೋಳಾಲ ಹೋಬಳಿಯ ಜೆಡಿಎಸ್ ಮತ್ತು ಬಿಜೆಪಿಯ 6ಮಂದಿ ಗ್ರಾ.ಪಂ ಸದಸ್ಯರುಗಳು ಪ್ರಮುಖ ಮುಖಂಡರು ಹಾಗೂ ನೂರಾರು ಕಾರ್ಯಕರ್ತ ರೊಂದಿಗೆ ಮಾಜಿ ಜಿ.ಪಂ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಕಾಂಗ್ರೇಶ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ ಪರಮೇಶ್ವರ್ರವರು ಜೆಡಿಎಸ್ ಪ್ರಾಬಲ್ಯವಿರುವ ಹೋಬಳಿಯಾಗಿದ್ದು ಕೋಳಾಲ ಭಾಗದ ಮುಖಂಡರಾದ ತಾ.ಪಂ ಮಾಜಿ ಅಧ್ಯಕ್ಷೆ ಸುಕನ್ಯಮಂಜುನಾಥ್ ಸೇರ್ಪಡೆಯಾದ ನಂತರ ಮತ್ತೆ 6 ಜನ ಮಾಜಿ ಗ್ರಾ.ಪಂ ಸದಸ್ಯರುಗಳು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಮಾಜಿ ಜಿ.ಪಂ ಸದಸ್ಯರಾದ ಪಿ.ಎನ್ ಕೃಷ್ಣಮೂರ್ತಿ ಆ ಭಾಗದ ಕೆಲವು ಜೆಡಿಎಸ್ ಮುಖಂಡರುಗಳಾದ ಸತೀಶ, ವೆಂಕಟೇಶ್, ಲಕ್ಷ್ಮೀಶಯ್ಯ, ಜಯಣ್ಣ, ಹನುಂತರಾಯಪ್ಪ, ಬಿಸ್ಕೂರಯ್ಯ, ರಾಮಸ್ವಾಮಿ ಸೇರಿದಂತೆ ಹಲವು ಮುಖಂಡರುಗಳು ಭೇಟಿಮಾಡಿ ಮನವೊಲಿಸುವಲ್ಲಿ ಯಾಶಸ್ವಿಗೊಂಡು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಸೇರ್ಪಡೆ ಸಂಧರ್ಭದಲಿ ವೀಕ್ಷಕ ಅನಿಲ್ಕುಮಾರ್ಪಾಟೀಲ್, ಕೆಪಿಸಿಸಿ ಕಾರ್ಯದಶರ್ಿ ದಿನೇಶ್, ತಾ.ಪಂ ಸದಸ್ಯೆ ಸುಮಾಅಶ್ವತ್ಥನಾರಾಯಣ್, ಆರ್.ಎಸ್ ರಾಜಣ್ಣ, ಮಾಜಿತಾ.ಪಂ ಸದಸ್ಯರಾದ ಹನುಮಂತರಾಪ್ಪ, ಶ್ರೀನಿವಾರಮೂರ್ತಿ ಸೇರಿದಂತೆ ಇತರರು ಇದ್ದರು.
Comments