ನಾನು ವಿರೋಧಿಯಲ್ಸ ಸsaದಾಶಿವ ಆಯೋಗ ರಚನೆಯಲ್ಲಿ ಪ್ರಮುಖ ಪಾತ್ರ ನನ್ನದೇ: ಪರಂ

05 Apr 2018 10:30 PM |
566 Report

ಕೊರಟಗೆರೆ ಏ.5:- ಸದಾಶಿವ ಆಯೋಗ ರಚನೆಯಾಗಿದ್ದು 1999-2014 ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ನಮ್ಮೆಲರ ಅಪೇಕ್ಷೆಯಂತೆ ಆಯೋಗರಚನೆಯಾಯಿತು, ನಾನು ವೈಯಕ್ತಿಕವಾಗಿ ಇದರ ಪರವಾಗಿ ನಿಂತು ಹೋರಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟೀಕರಿಸಿದರು.

 ತಾಲೂಕಿನ ಚೆನ್ನರಾಯನ ದುರ್ಗ  ಹೋಬಳಿಯ ಕುರಂಕೋಟೆ ಗ್ರಾಮದ ದೊಡ್ಡಕಾಯಪ್ಪ ದೇವಾಲಯ ಬಳಿ ಮಾದಿಗ ಸಮುದಾಯದ ಸಭೆಯಲ್ಲಿ ಮಾತನಾಡಿದರು.
ಹಿಂದೆ ಕಾಂಗ್ರೇಸ್ ಸಕರ್ಾರದ ಪ್ರಮುಖ ಮಂತ್ರಿಗಳಾಗಿದ್ದ ನಾನು, ಮಲ್ಲಿಕಾರ್ಜುನ ಖರ್ಗೆ , ತಿಮ್ಮಾಪುರ್ ಸೇರಿದಂತೆ ಇತರ ದಲಿತ ಮಂತ್ರಿಗಳು ಒತ್ತಾಯಿಸಿ ಸದಾಶಿವ ಆಯೋಗವನ್ನು ರಚನೆ ಮಾಡಿಸಿದೆವು, ಅದರೆ ಅದನ್ನು ವಿರೋದಪಕ್ಷವರ ಜೊತೆ ಸೇರಿಕೊಂಡಿರುವ ಕೆಲವರು ನನ್ನ ವಿರುದ್ದ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ಅದರೆ ನಮ್ಮ ದಲಿತ ಸಮುದಾಯಗಳ ಜನರು ನನ್ನ ಮೇಲೆ ವಿಶ್ವಾಸವನ್ನು ಇಟ್ಟಿದ್ದು ನಾನು ಸದಾಶಿವಾಯೋಗದ ಪರವಾಗಿದ್ದೇನೆ ಎಂದು ಹೇಳಿದರು.
     ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಶೋಷಿತ ವರ್ಗಗಳ ಸಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದಂತಹ ಮಹಾನ್ ಮಾನವತಾವಾದಿಗಳು ಬಾಬು ಜಗಜೀವನ್ರಾಂ ಉಪ ಪ್ರಧಾನಿಯಾಗಿದ್ದ ಕಾಲದಲ್ಲೂ ಸಹ ಸವಣರ್ಿಯರಿಂದ ಶೋಷಣೆಗೆ ಒಳಗಾದ ಪರಿಸ್ಥಿತಿಯನ್ನು ಅನುಭವಿಸಿದರು, ಆದರೂ ಸಹ ತಮ್ಮ ಹೋರಾಟ ಮುಂದುವರೆಸಿದರು, ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ವರ್ಗಗಳ ಸಮಾನತೆಗೆ ರಚಿಸಿದ್ದ ಸಂವಿಧಾನ ಭಾರತೀಯರಿಗೆ ಪವಿತ್ರ ಗ್ರಂಥವಿದ್ದಂತೆ, ಆದರೆ ಬಿಜೆಪಿ ಪಕ್ಷದವರು ಅದನ್ನು ಬದಲಾಯಿಸುವುದಾಗಿ ಹೇಳಿ ಶೋಷಿತ ವರ್ಗಕ್ಕೆ ಅನ್ಯಾಯ ಮಾಡಿ ಅಂಬೇಡ್ಕರ್ರಿಗೆ ಅಪಮಾನ ಮಾಡಲು ಹೊರಟಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಶೋಷಿತರ ವರ್ಗದ ಎಲ್ಲಾ ಜನರು ಒಟ್ಟಾಗಿ ಬಿಜೆಪಿ ಪಕ್ಷವನ್ನು ಮತ್ತು ಅವರೊಂದಿಗೆ ಅವಶ್ಯಕ ಬಿದ್ದಾಗ ಕೈಜೋಡಿಸುವ ಲೆಕ್ಕಾಚಾರ ಹಾಕುತ್ತಿರುವ ಜೆಡಿಎಸ್ ಪಕ್ಷದವರಿಗೆ ತಕ್ಕ ಬುದ್ದಿಯನ್ನು ಕಲಿಸುತ್ತಾರೆ ಎಂದರು.
      ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಕೆಂಚಮಾರಯ್ಯ ಮಾತನಾಡಿ ಈ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷವು ಬಡವರಿಗೆ ಅವಶ್ಯಕವಾಗಿದ್ದು ಕೆವಲ ದಲಿತರಿಗಷ್ಟೆಅಲ್ಲಾ, ಅಲ್ಪಸಂಖ್ಯಾತ ಮತ್ತು ಹಿಂದು ಳಿದವರ್ಗಗಳು ಸೇರಿದಂತೆ ಎಲ್ಲಾ ಶೋಷಿತ ಸಮುದಾಯಗಳಿಗೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದು ಅನಿವಾರ್ಯತೆ ಇದೆ, ಕೇಂದ್ರದಲ್ಲಿ ಬಿಜೆಪಿ ಸಕರ್ಾರ ಬಂದಮೇಲೆ ದೇಶದ ಎಲ್ಲಾ ರಾಜ್ಯಗಳಲ್ಲೂ ದಲಿತರ ಮೇಲೆ ದೌರ್ಜನ್ಯವು ಹೆಚ್ಚುತ್ತಿದೆ, ಕ್ಷುಲ್ಲಕ ಕಾರಣಗಳಿಗೆ ದಲಿತರನ್ನು ಹೊಣೆ ಮಾಡಿ ಅವರನ್ನು ಪಶುಗಳಂತೆ ನಡೆಸಿಕೊಂಡು ಸಕರ್ಾರವನ್ನು ದುರುಪ ಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.

    ಈ ಸಂದರ್ಭಧಲ್ಲಿ ಕೆಪಿಸಿಸಿ  ಕಾರ್ಯದರ್ಶಿಗಳಾದ ಅನಿಲ್ ಕುಮಾರ್  ಪಾಟೀಲ್, ದಿನೇಶ್, ಜಿ.ಪಂ ಸದಸ್ಯ ಜಿ.ಜೆ.ರಾಜಣ್ಣ, ಮಾಜಿ ಜಿ.ಪಂ.ಸದಸ್ಯ ಟಿ.ಡಿ ಪ್ರಸನ್ನಕುಮಾರ್, ತಾ.ಪಂ.ಸದಸ್ಯ ಜ್ಯೋತಿ ಎಸ್.ಎಲ್.ಎನ್.ಸ್ವಾಮಿ, ಗ್ರಾ.ಪಂ.ಅದ್ಯಕ್ಷ ಲಕ್ಷ್ಮೀ, ಎಪಿಎಂಸಿ ಸದಸ್ಯ ರಂಗರಾಜು, ರವಿಕುಮಾರ್, ಪ.ಪಂ ಸದಸ್ಯ ಕೆ.ಆರ್ ಓಬಳರಾಜು, ಮುಖಂಡರಾದ ರಾಮಸ್ವಾಮಿ, ಚಿಕ್ಕರಾಜು, ನರಸಿಂಹಪ್ಪ, ಅರಕೆರೆಸೋಮಶೇಖರ್, ಅಶ್ವತ್ಥನಾರಾಯಣರಾಜು, ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments