'ಕೈ' ಬಿಟ್ಟ ಪ್ರಭಾವಿ ನಾಯಕರಿಗೆ ಅಧಿಕೃತ ಹೊರೆ ಹೊರಿಸಿದ ದೇವೇಗೌಡ್ರು...!!
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ರಂಗೇರುತ್ತಿದೆ. ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣೆ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್, ತನ್ನ ಅಧಿಕಾರದ ಪ್ರಾಬಲ್ಯದಿಂದ ಅನ್ಯ ಪಕ್ಷಗಳ ಮುಖಂಡರು ತಮ್ಮತ್ತ ತಿರುಗು ನೋಡುವಂತೆ ಮಾಡುತ್ತಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಾಂಗ್ರೆಸ್ ನ ಪ್ರಭಾವಿ ಮುಖಂಡರು ಜೆಡಿಎಸ್ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ವೆಂಕಟಶಿವಾರೆಡ್ಡಿ ಯವರ ನಾಯಕತ್ವಕ್ಕೆ ಮೆಚ್ಚಿ ದೇವೇಗೌಡರ ಸಮ್ಮುಖದಲ್ಲಿ ಕುಮಾರಣ್ಣನವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಮುಖಂದರು ಅನ್ನುವುದಕ್ಕಿಂತ ಹೆಚ್ಚಾಗಿ ಆರೋಗ್ಯ ಸಚಿವ ರಮೇಶಕುಮಾರ್ ಅವರ ಕಟ್ಟಾ ಅನುಯಾಯಿಗಳಾಗಿದ್ದ ದಲಿತ ಮುಖಂಡ, ವಕೀಲ ಶಿವಪ್ಪ, ಪುರಸಭೆ ಮಾಜಿ ಅಧ್ಯಕ್ಷೆ ಅರುಣಾ ಅವರ ಪತಿ ಹಾಗು ಹಿಂದುಳಿದ ವರ್ಗಗಳ ಮುಖಂಡ ಜಗದೀಶ್ ಮತ್ತು ಸಹೋದರರು, ಪುರಸಭೆ ನಾಮ ನೀರ್ದೇಶಕ ಸದಸ್ಯ ಮುಂಜುನಾಥಗೌಡ,ಮುನಿನಾರಯಣ ಸೇರಿದಂತೆ ಹಲವಾರು ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಪಕ್ಷದ ಬೆಳವಣಿಗೆ ನೋಡುತ್ತಿದ್ದರೆ ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಎರಡು ಮತ್ತಿಲ್ಲ.
Comments