ಏಪ್ರಿಲ್ 08 ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ "ಮತದಾರರ ನೋಂದಣಿ ಅಭಿಯಾನ"
ಚುನಾವಣಾ ಆಯೋಗವು ಎಲ್ಲ ಮತಗಟ್ಟೆಗಳಲ್ಲಿ ಏಪ್ರಿಲ್ 08 ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ "ಮಿಂಚಿನ ಮತದಾರರ ನೋಂದಣಿ ಅಭಿಯಾನ" ಆಯೋಜಿಸಿದೆ. 18 ವಯಸ್ಸು ಮೇಲ್ಪಟ್ಟ ಎಲ್ಲಾ ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳುವುದರ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿರುವವರನ್ನು ಹಾಗೂ ಹೊಸದಾಗಿ ಸೇರ್ಪಡೆ ಆಗಬೇಕಾಗಿರುವವರನ್ನು ಅಂದು ಮತಗಟ್ಟೆಗೆ ಕಳುಹಿಸಿ ನೋಂದಾಯಿಸಿಕೊಳ್ಳಲು ತಿಳಿಸಿ. ನಿಮ್ಮ ಮತ... ನಿಮ್ಮ ಭವಿಷ್ಯ... “ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಮಾಡಿ ಹೆಮ್ಮೆಯಿಂದ” “ಮತ ಚಲಾವಣೆ ನಿಮ್ಮ ಹಕ್ಕು ....ತಪ್ಪದೇ ಮತ ಚಲಾಯಿಸಿ... ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಗಳಲ್ಲಿ ಮತದಾರರಿಗೆ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದ್ದು, ಜನರು ಮತದಾನದ ಕುರಿತಂತೆ ಅರಿವು ಪಡೆದುಕೊಳ್ಳಬಹುದು, ಮತ ಯಂತ್ರದ ಜೊತೆಗೆ ವಿವಿ ಪ್ಯಾಡ್ ಅಳವಡಿಸಲಾಗಿದ್ದು ಯಾವ ಪಕ್ಷಕ್ಕೆ ಮತದಾನ ಮಾಡಿದ್ದೇನೆ ಎಂಬುದನ್ನು ಅರಿಯಬಹುದು. ಇದು ಮತದಾನ ಮಾಡಿದ ಏಳು ಸೆಕೆಂಡ್ ವರೆಗೆ ಗೋಚರಿಸಲಿದೆ.
Comments