ಜೆಡಿಎಸ್ ಪರ ಪ್ರಚಾರಕ್ಕೆ ನಿಂತ ಬಿಗ್ ಬಾಸ್ ಸ್ಪರ್ಧಿ..!!

04 Apr 2018 12:21 PM |
6784 Report

ಕರ್ನಾಟಕ ವಿಧಾನಸಭಾ  ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ಸ್ಟಾರ್​ ಕ್ಯಾಂಪೇನರ್​ ಅಬ್ಬರ ಕೇಳಿ ಬರುತ್ತಿದೆ. ಬಿಗ್​ಬಾಸ್​ ಸ್ಫರ್ಧಿಯಾಗಿದ್ದ, ಅಕ್ಕ ಧಾರವಾಹಿ ಖ್ಯಾತಿಯ ಅನುಪಮಾ ಗೌಡ  ರವರು ಮಂಡ್ಯದ ಜೆಡಿಎಸ್​ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿರುವುದು ಸದ್ಯ ವೈರಲ್​ ಆಗಿದೆ.

ಮಂಡ್ಯದ ಎಂ.ಶ್ರೀನಿವಾಸ್​ ಅವರ ಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಮತ ಪ್ರಚಾರ ನಡೆಸಿದ್ದಾರೆ. ತಮ್ಮ ಫೇಸ್​ ಬುಕ್​ನಲ್ಲಿ ಎಂ. ಶ್ರೀನಿವಾಸ್​ ಒಬ್ಬರು ಜನನಾಯಕ, ನಾನು ಇವರ ಬಗ್ಗೆ ಕೇಳಿದ್ದೀನಿ. ವಿದ್ಯಾರ್ಥಿಗಳಿಗಾಗಿ ವಿದ್ಯಾ ಸಂಸ್ಥೆಯನ್ನು ಕಟ್ಟಿಸಿದ್ದಾರೆ, ಬಡ ಮಕ್ಕಳಿಗೆ ಅಕ್ಷರ ದಾನ ಮಾಡಿದ್ದಾರೆ. ಅನಾಥ ಮಕ್ಕಳಿಗಾಗಿ ಅನಾಥಶ್ರಮ ಕಟ್ಟಿಸಿದ್ದಾರೆ. ಎಷ್ಟೋ ವೃದ್ಧರಿಗೆ ದಾರಿ ದೀಪವಾಗಿದ್ದಾರೆ. ತುಂಬಾ ಕಷ್ಟದಿಂದ ಬೆಳೆದು ಬಂದವರು , ತುಂಬಾ ನೋವುಗಳನ್ನು ಅನುಭವಿಸಿದವರು, ಅವರಿಗೆ ಮಾತ್ರ ಬಡವರ ಕಷ್ಟ ಅರ್ಥವಾಗುವುದು. ಮತ್ತಷ್ಟು ಸೇವೆ ಮಾಡಲು ಅವಕಾಶ ಮಾಡಿಕೊಡಿ, ನಿಮ್ಮ ಅಮೂಲ್ಯವಾದ ಮತ ಕೊಟ್ಟು ಅವರನ್ನು ಮತ್ತೊಮ್ಮೆ ಜನನಾಯಕನಾಗಿ ಮಾಡಿ ಎಂದು ಮತದಾರರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಎಂ.ಶ್ರೀನಿವಾಸ್​ ಗೂ ಈ ಮೂಲಕ ವಿಶ್​ ಮಾಡಿದ್ದಾರೆ. ಇನ್ನೂ ಎಂ.ಶ್ರೀನಿವಾಸ್​ ಮಂಡ್ಯದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Edited By

Shruthi G

Reported By

hdk fans

Comments