ದೇವೆಗೌಡರ ಚಾಣಾಕ್ಷ ಬುದ್ದಿ ಸಖತ್ ಆಗಿಯೇ ವರ್ಕೌಟ್ ಆಯ್ತು..!!



ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಪ್ರಚವಿತ ವಿದ್ಯಮಾನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಾ ಬರುತ್ತಿವೆ. ಅದು ಎಲ್ಲರ ಗಮನಕ್ಕೂ ಕೂಡ ಬರುತ್ತಿದೆ. ಆದರೆ ಪಕ್ಷದಿಂದ ಪಕ್ಷಕ್ಕೆ ಹಾರುವ ಕೆಲಸವನ್ನು ಮಾತ್ರ ಅಭರ್ಥಿಗಳು ನಿಲ್ಲಿಸಿಲ್ಲ.
ಹೌದು.. ನೆನ್ನೆ ಅಷ್ಟೆ ಚಾಮರಾಜ ರಾಜ ಪೇಟೆ ಅಲ್ತಾಫ್ ಖಾನ್ ಕಾಂಗ್ರೇಸ್ ಪಕ್ಷವನ್ನು ಬಿಟ್ಟು ತಮ್ಮ ಬೃಹತ್ ಬೆಂಬಲಿಗರೊಂದಿಗೆ ಜೆ.ಪಿ ಭವನದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿಕೊಂಡರು. ಇದನ್ನ ನೋಡುವುದಾದರೆ ಚಾಮರಾಜ ಪೇಟೆ ಟಿಕೆಟ್ ಆಕಾಂಕ್ಷಿಯಾಗಿದ್ದ ಜೆಡಿಎಸ್ ಮುಖಂಡ ಇಮ್ರಾನ್ ಪಾಷ ಕೂಡ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲಿಯವರೆಗೂ ಕೂಡ ಇಮ್ರಾನ್‍ಪಾಷ ಅವರನ್ನು ಜೆಡಿಎಸ್‍ನಿಂದ ಕಣಕ್ಕಿಳಿಸಲು ನಿರ್ಧಾರವನ್ನು ಮಾಡಲಾಗಿತ್ತು. ಆದರೆ, ಅಲ್ತಾಫ್ ಖಾನ್ ಅವರನ್ನು ಜೆಡಿಎಸ್‍ಗೆ ಕರೆತಂದು ಚಾಮರಾಜಪೇಟೆಯಿಂದ ಅಭ್ಯರ್ಥಿ ಎಂದು ಟಿಕೆಟ್ ಘೋಷಿಸಿದ ಹಿನ್ನೆಲೆಯಲ್ಲಿ ಇಮ್ರಾನ್ ಪಾಷ ಅವರು ಏನಾದರೂ ಬೇಸತ್ತು ಪಕ್ಷ ತೊರೆಯಬಹುದು ಎಂಬ ಆತಂಕವು ಕೂಡ ದೇವೆಗೌಡರ ಮನಸ್ಸಿನಲ್ಲಿತ್ತು. ಆದರೆ ದೇವೆಗೌಡರು ಬಹು ಚಾಣಾಕ್ಷ ಬುದ್ದಿಯಿಂದ ಇಮ್ರಾನ್ ಪಾಷ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೆ ಅಲ್ಲದೆ ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಇಮ್ರಾನ್ ಅಷ್ಟು ಸಮರ್ಥರಾಗಿಲ್ಲದ ಕಾರಣ ಅಲ್ತಾಫ್‍ನನ್ನು ಕಣಕ್ಕಿಳಿಸಲು ನಿರ್ಧರಿಸಿ ಇಮ್ರಾನ್ ಅವರನ್ನು ಕೂಡ ತಮ್ಮ ಜತೆಗಿಟ್ಟುಕೊಂಡು ಇಮ್ರಾನ್-ಅಲ್ತಾಫ್ ಜೋಡಿಯೊಂದಿಗೆ ಜಮೀರ್‍ರನ್ನು ಮಣಿಸಲು ದೇವೇಗೌಡರು ತಂತ್ರ ಹೆಣೆದಿದ್ದಾರೆ ಎನ್ನಬಹುದು. ಜಮೀರ್ ಅಹಮದ್ ಅವರನ್ನು ಸೋಲಿಸಲು ಒಳ್ಳೆಯ ಚಕ್ರವ್ಯೂಹವನ್ನೆ ರಚಿಸಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಇಮ್ರಾನ್ ಪಾಷ ಅವರನ್ನು ಉಪಮೇಯರ್ ಮಾಡುವುದಾಗಿ ದೇವೆಗೌಡರು ಭರವಸೆಯನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಚಾಮರಾಜಪೇಟೆಯಲ್ಲಿ ಜೆಡಿಎಸ್ ಬಾವುಟವನ್ನು ಹಾರಿಸಲು ಸಕಲ ಸಿದ್ದತೆಗಳು ಕೂಡ ನಡೆಯುತ್ತಿವೆ.
Comments