ತೆನೆಹೊತ್ತ ರೈತಮಹಿಳೆ ಬಿಟ್ಟು 'ಕೈ' ಹಿಡಿದ ಕೆ.ಬಿ ಲೋಕೇಶ್



ಕೊರಟಗೆರೆ ಏ:- ಪರಮೇಶ್ವರ್ ಮತ್ತು ಕಾಂಗ್ರೇಸ್ ತತ್ವ ಸಿದ್ದಾಂತಕ್ಕೆ ಮಾಜಿ ತಾ.ಪಂ ಅಧ್ಯಕ್ಷ ಕೆ.ಬಿ ಲೋಕೇಶ್ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ಜೆಡಿಎಸ್ ತೊರೆದು ಕಾಂಗ್ರೇಶ್ ಗೆ ಸೇರ್ಪಡೆಗೊಂಡಿದ್ದಾರೆ.
ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿ ಕಳೆದ ಬಾರಿ ಪಕ್ಷದೊಳಗೆ ಮತ್ತು ಹೊರಗಿನಿಂದ ಬಂದ ಕೆಲವು ಕುತಂತ್ರಿಗಳಿಂದ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಗೆ ಸೋಲಾಗಿತ್ತು ಆದರೆ ಈ ಬಾರಿ ಇಡೀ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಮತ್ತು ಪರಮೇಶ್ವರ್ ಬೆಂಬಲವ್ಯಕ್ತವಾಗಲಿದ್ದು ಯಾವುದೇ ಕಾರಣಕ್ಕೂ ಈ ಬಾರಿ ಯಾವುದೇ ಕುತಂತ್ರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರು.
ಇಡೀ ರಾಜ್ಯದ ಕಣ್ಣು ಕ್ಷೇತ್ರದ ಮೇಲಿದ್ದು ಬಹುತೇಕ ಎಲ್ಲರೂ ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕು ಎನ್ನುವಂತಹ ಇಂಕಿತವನ್ನು ವ್ಯಕ್ತಪಡಿಸುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಎಲ್ಲರೂ ಒಮ್ಮತದಿಂದ ಈ ಯೋಜನೆಯನ್ನು ಸಹಕಾರ ಮಾಡುತ್ತೇವೆ ಎಂದರು.
ಲೋಕೇಶ್ ಜೊತೆಯಲ್ಲಿಯೇ ಗುಂಡಿನಪಾಳ್ಯದ ಜೆಡಿಎಸ್ ಮುಖಂಡ ಎಚ್ಆರ್ ಲಕ್ಷ್ಮೀಶ್ ,ರಮೇಶ್ ಜೆ.ಸಿ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ನೇತೃತ್ವದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೇಶ್ ಮಹಿಳಾ ಘಟಕದ ಅಧ್ಯಕ್ಷ ಜಯಮ್ಮ, ತಾಲೂಕು ಎಪಿಎಂಸಿ ಅಧ್ಯಕ್ಷ ಬೂಚನಹಳ್ಳಿ ವೆಂಕಟೇಶ್, ಪ.ಪಂ ಸದಸ್ಯ ಅಶ್ವಥ್ ಸೇರಿದಂತೆ ಇತರರು ಇದ್ದರು.
Comments