ಸಿಡಿಲು ಬಡಿದು ಮಹಿಳೆ ಸಾವು
ಕೊರಟಗೆರೆ ಮಾ.:-ಗಾಳಿ ಮಳೆಯಿಂದ ಸಿಡಿಲು ಬಡಿದ್ದು ರೈತ ಮಹಿಳೆಯೊಬ್ಬರು ಸ್ಥಳದಲ್ಲಿ ಸಾವನ್ನಪ್ಪಿ ಮನೋರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಕೋಳಾಲ ಹೋಬಳಿಯ ಪಾತಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕ್ಯಾತಗಾನಹಳ್ಳಿ ಗ್ರಾಮದ ಹನುಮಕ್ಕ ಮತ್ತು ನರಸಮ್ಮ ಎನ್ನುವವರು ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅವಗಡ ನಡೆದಿದೆ.
ಕೃಷಿ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ಮಳೆ ಬಂದ ಕಾರಣ ಮರದ ಕೆಳಗೆ ನರಸಮ್ಮ ಮತ್ತು ಹನುಮಕ್ಕ ಆಶ್ರಯ ಪಡೆದು ನಿಂತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದ ಕಾರಣ ಸ್ಥಳದಲ್ಲಿಯೇ ನರಸಮ್ಮ (50)ಸಾವನ್ನಪಿದ್ದು ಮತೋರ್ವ ಮಹಿಳೆ ಹನುಮಕ್ಕ ತೀವ್ರವಾಗಿ ಗಾಯಗೊಂಡಿದ್ದು ಕೊರಟಗೆರೆ ಸಕರ್ಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments