ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು: ವೀರಭದ್ರಶಿವಾಚಾರ್ಯಸ್ವಾಮೀಜಿ
ಕೊರಟಗೆರೆ ಏ.:- ನಡೆದಾಡುವ ದೇವರು 111 ನೇ ವರ್ಷಕ್ಕೆ ಕಾಲಿಟ್ಟಿದ್ದು ಇವರ ಆದರ್ಶಗಳು ಅನುಕರಣೀಯ ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾದ್ಯಕ್ಷ ವೀರಭದ್ರಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ಪಟ್ಟಣದ ಎಸ್ಎಸ್ ಆರ್ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ವೀರಶೈವ ಲಿಂಗಾಯತ ಸಂಘ, ಮಹಿಳಾ ಮಂಡಳಿ, ಲಿಂಗಾಯತ ಯುವ ಪಡೆ, ಆಖಿಲ ಭಾರತ ವೀರಶೈವ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿವಕುಮಾರಸ್ವಾಮಿ 111 ನೇ ಜನ್ಮ ದಿನಾಚರಣೆ ಕಾರ್ಯಕ್ರದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ತ್ರಿವಿದ ದಾಸೋಹಿಯಾಗಿ ಎಷ್ಟೊಂದು ಜನರ ಬದುಕನ್ನು ಕಟ್ಟಿಕೊಟ್ಟಿದ್ದಾರೆ, ಸನ್ಯಾಸತ್ವ ಸ್ವೀಕರಿಸಿದಾಗಿನಿಂದಲೂ ಬಡ ಮಕ್ಕಳ ವಿದ್ಯಾಬ್ಯಾಸಕ್ಕೆ ಟೊಂಕಕಟ್ಟಿ ನಿಂತು ನಿರಂತರವಾಗಿ ಅವಿರತವಾಗಿ ಶ್ರಮಿಸಿದ್ದು ಇವರ ಜನ್ಮದಿನಾಚರಣೆಯಿಂದ ಇನ್ನಷ್ಟು ಚೈತನ್ಯ ಸಿಗಲಿ ಇವರ ಚಿರಕಾಲ ಬಾಳುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಪರ್ವತಯ್ಯ, ವೀರಶೈವ ಮಹಿಳಾ ಘಟದ ಅಧ್ಯಕ್ಷ ಮಮತಾದಿವಾಕರ್, ಕಾರ್ಯದರ್ಶಿ ವೇದ, ಬಸವ ಸದನದ ಉಪಾಧ್ಯಕ್ಷ ಡೇರಿ ಸದಾಶಿವಯ್ಯ, ಜಗಜ್ಯೋತಿ ಬಸವೇಶ್ವರ ಸಂಘ ಮಾಜಿ ಅಧ್ಯಕ್ಷ ಕೆ.ಬಿ ಲೋಕೇಶ್, ಮುಖಂಡರಾದ ಕೆ.ಎಂ ಸುರೇಶ್, ಕೆ.ಸಿ ಶಿವಕುಮಾರ್, ಕೆ.ಆರ್ ಕಿರಣ್, ಷನ್ಮುಗ, ನಾಗರಾಜು,ಪ್ರವೀಣ್, ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
Comments