ಸಿದ್ದಗಂಗೆ ನಿರಾಶ್ರಿತರ ನೊಂದವರ ಆಶ್ರಯತಾಣ: ಎಂ.ಎಂ ಸಿದ್ದಮಲ್ಲಪ್ಪ
ಕೊರಟಗೆರೆ ಏ. :-ನೊಂದವರ… ಅಸಹಾಯಕರ… ನಿರಾಶ್ರಿತರ ಕೇಂದ್ರವಾಗಿ ಸಿದ್ದಗಂಗೆ ರಾಜ್ಯದಲ್ಲಿದೆ ಎಂದು ತಾಲೂಕು ಜೆಡಿಎಸ್ ಉಪಾದ್ಯಕ್ಷ ಎಂ. ಎಂ ಸಿದ್ದಮಲ್ಲಪ್ಪ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಪರಿವರ್ತನಾ ಸ್ವ-ಸಾಯ ಸಂಘ, ಪ್ರೆಂಡ್ಸ್ ಗ್ರೂಪ್, ಜಗ್ಗೇಶ್ ಅಭಿಮಾನಿಗಳ ಬಳಗ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಶಿವಕುಮಾರಸ್ವಾಮಿ 111 ನೇ ಜನ್ಮ ದಿನಚಾರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಒಂದು ಜಾತಿಗೆ ಸೀಮಿತವಾದೇ ರಾಜ್ಯ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದಲೂ ತ್ರಿವಿದವನ್ನು ಅರಸಿ ಕ್ಷೇತ್ರಕ್ಕೆ ಸಾವಿರಾರು ಜನರು ಬಂದಿದ್ದು ಇವರೆಲ್ಲರ ಸೇವೆಗೆ ಟೊಂಕಟ್ಟಿ ನಿಂತ ಶ್ರೀಗಳ ಸಾಧನೆ ಅನನ್ಯ ಎಂದರು.
ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರಶಿವಾಚಾರ್ಯಸ್ವಾಮೀಜಿ ಸಾರ್ವಜನಿಕರಿಗೆ ಪ್ರಸಾದವನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮಲ್ಲಿ ಪರಿವರ್ತನೆ ಸಂಘದ ಅಧ್ಯಕ್ಷ ಎಸ್. ಶಿವಕುಮಾರ್, ಜಿಲ್ಲಾ ಜಗ್ಗೇಶ್ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಡಿ.ಎಲ್ ಮಲ್ಲಯ್ಯ, ತಾಲೂಕು ಎಸ್ ಟಿ ಘಟಕ ಅಧ್ಯಕ್ಷ ಕೆ.ಎನ್ ಲಕ್ಷ್ಮಿನಾರಾಯಣ್,ಮುಖಂಡರಾದ ಹೆಚ್.ವಿ ಪಾಳ್ಯ ಮಂಜುನಾಥ್, ಜಿ.ಎಂ ಶಿವಾನಂದ್, ದಿವ್ಯಪ್ರಸಾದ್, ಪುಟ್ಟರಾಜು ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
Comments