ನಾನು ನಿಮ್ಮನೆ ಮಗಾ... ನನ್ನ ಮಾತಿನಲ್ಲಿ ತಪ್ಪದೇನಿದೆ...???
ಕೊರಟಗೆರೆ :- ಅಪ್ಪಾ ಚೆನ್ನಾಗಿದ್ದಾರಾ… ಅಮ್ಮ ಚೆನ್ನಾಗಿದ್ದಾರಾ… ಮಕ್ಕಳು ಚೆನ್ನಾಗಿದ್ದಾರಾ… ನಾನು ಭೇಟಿಯಾದವರನ್ನು ಕೇಳುವುದನ್ನೇ ವಿರೋಧಿಗಳು ಲೇವಡಿ ಮಾಡುತ್ತಿದ್ದಾರೆ ಅವರಿಗೆ ಗೊತ್ತಿಲ್ಲ ನಾನು ನಿಮ್ಮ ಮನೆಯ ಮಗ ನಮ್ಮ ಮನೆಯವರು ಹೇಗಿದ್ದಾರೆ ಎಂದು ಕೇಳುತ್ತಿರುವುದು ತಪ್ಪೇ ಎಂದು ತಮ್ಮ ಮಾತಿನ ಶೈಲಿಯನ್ನು ಟೀಕಿಸುವವರಿಗೆ ಶಾಸಕ ಪಿ.ಆರ್ ಸುಧಾಕರ್ ಲಾಲ್ ವಿರೋಧಿಗಳಿಗೆ ಪ್ರಶ್ನಿಸಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ನಡೆದಂತಹ ಕುಮಾರ ಪರ್ವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ಮಾತಿನ ಶೈಲಿಯನ್ನು ವ್ಯಂಗ್ಯವಾಗಿ ಅಪಹಾಸ್ಯದ ರೀತಿ ನೋಡುತ್ತಿದ್ದವರ ವಿರುದ್ದ ಹರಿಹಾಯ್ದರು.
ಈ ಬಾರಿ ಚುನಾವಣೆಯಲ್ಲಿ ನೀವು ಹಾಕುವ ಮತ ಕೇವಲ ನನ್ನನ್ನು ಶಾಸಕನ್ನಾಗಿ ಮಾಡಲು ಅಲ್ಲ… ಕುಮಾಸ್ವಾಮಿಯನ್ನು ಮುಖ್ಯಮಂತ್ರಿಯನ್ನು ಮಾಡಲು ಹಾಕುವಂತದ್ದು ಹಿಂದೆ ಶಾಸಕರನ್ನು ನೋಡಲು ಬೆಂಗಳೂರಿಗೆ ಹೋಗಬೇಕಿತ್ತು ಆದರೆ ನಾನು ನಿಮ್ಮೊಂದಿಗೆ ಇರುವವನು ನಾನು ನಿಮ್ಮ ಸಮಸ್ಯೆಯನ್ನು ಕೇಳಲು ನಿಮ್ಮೂರಿಗೆ ಬರುತ್ತಿದ್ದೇನೆ… ಕ್ಷೇತ್ರದ ಜನರ ಋಣವನ್ನು 10 ಜನ್ಮ ಹೆತ್ತಿದರೂ ತೀರಿಸಲಾಗುವುದಿಲ್ಲ… ನಿಮ್ಮಲ್ಲರ ಪ್ರೀತಿಗೆ ನಾನು ಸದಾ ಚಿರರುಣಿ ಎಂದರು.
Comments