ಪರಂ ನೀವು ಇಂಗೆ ಮಾಡಿದ್ದೀರಾ.....???!!!! ಇದು ನಿಜನಾ....



ಕೊರಟಗೆರೆ :-ಕೊರಟಗೆರೆ ನಡೆಯತ್ತಿರುವ ವಿಕಾಸ ಪರ್ವಕ್ಕೆ ಯಾರೊಬ್ಬರೂ ಹೋಗಬಾರದು ಎಂದು ಪರಮೇಶ್ವರ್ ಪ್ರತೀ ಭೂತ್ ಗೆ 10 ಸಾವಿರ ರೂ ನಂತೆ 23 ಲಕ್ಷ ಹಣವನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೀಡಿದ್ದಾರೆ ಎನ್ನುವ ಗಂಬೀರ ಆರೋಪವನ್ನು ತಾಲೂಕಿನ ತುಂಬಾಡಿ ಕಾರ್ಯಕರ್ತನೊಬ್ಬ ಮಾಡಿದ್ದಾನೆ
ಕೊರಟಗೆರೆ ಪಟ್ಟಣದಲ್ಲಿ ನಡೆಯುತ್ತಿದ್ದ ಜೆಡಿಎಸ್ ಕುಮಾರ ಪರ್ವ ಯಾತ್ರೆಗೆ ಯಾರೊಬ್ಬರೂ ಹೋಗಬಾರದೆಂದು ಹಣ ನೀಡಿದ್ದಾರೆ ಎಂದು ಆರೋಪವನ್ನು ಕಾರ್ಯಕರ್ತ ವೇಧಿಕೆಯಲ್ಲಿ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿಗೆ ವೇಧಿಕೆಯಲ್ಲಿ ಚೀಟಿಯನ್ನು ನೀಡುವ ಮೂಲಕ ವಿಚಾರವನ್ನು ವೇಧಿಕೆಯಲ್ಲಿ ಜನರಿಗೆ ತಿಳಿಸುವಂತೆ ಹೇಳಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಬಾಷಣದಲ್ಲಿ ಈ ವಿಚಾರನ್ನು ಪ್ರಸ್ತಾಪಿಸಿದ್ದಾರೆ.
ಇಂತಹ ಯೋಜನೆ ನಮ್ಮ ಕಾರ್ಯಕರ್ತರೆದುರು ನಡೆಯುವುದಿಲ್ಲ ನಿಮಗೆ ಎಷ್ಟೇ ಹಣ ನೀಡಿ ಬರಬೇಡಿ ಎದ್ರೂ… ನಿಮ್ಗೆ ಕಾರ್ಯಕ್ರಮಲ್ಲಿ ಯಾವುದೇ ಊಟ.. ನೀರು ಸಿಗಲ್ಲ ಅಂತಾ ಗೊತ್ತಿದ್ರೂ ಬಂದಿದ್ದೀರಾ…. ನೀವು ನಿಜವಾದ ಕಾರ್ಯಕರ್ತರು ಎಂದು ಕಾರ್ಯಕರ್ತರನ್ನು ನಿಷ್ಟಾವಂತರು ಎಂದು ಹೇಳಿದ್ದಾರೆ.
Comments