ಜೆಡಿಎಸ್ ಬಿಟ್ಟು ಕಾಂಗ್ರೇಸ್ ಬಾಗಿಲು ಪಕ್ಷದ ಬಾಗಿಲ ತಟ್ಟಿದ್ದು ಯಾಕೆ ಸಿದ್ದರಾಮಯ್ಯ.....?????
ಕೊರಟಗೆರೆ ಏ. :- ನಾವು ಅವಕಾಶವಾದಿಗಳಲ್ಲ…. ಜೆಡಿಎಸ್ ನಲ್ಲಿ ಮುಖ್ಯಮಂತ್ರಿ ಮಾಡಲಿಲ್ಲ ಎನ್ನುವುಕ್ಕೆ ಮುಖ್ಯಮಂತ್ರಿಯ ಅವಕಾಶಕ್ಕಾಗಿ ಪಕ್ಷವನ್ನು ತೊರೆದು ಕಾಂಗ್ರೇಸ್ ಪಕ್ಷದ ಬಾಗಿಲನ್ನು ತಟ್ಟಿದ ನೀವೇ ನಿಜವಾದ ಅವಕಾಶವಾದಿ ಎಂದು ಸಿ.ಎಂ ಸಿದ್ದರಾಮಯ್ಯರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಸಿದ್ದರಾಮ್ಯಯರ ಹೇಳಿಕೆಗೆ ಟಾಂಗ್ ನೀಡಿದರು.
ಪಟ್ಟಣದಲ್ಲಿ ಕುಮಾರಪರ್ವ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ ಜೆಡಿಎಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಇದೇ ಪಕ್ಷದಲ್ಲಿ 25 ವರ್ಷ ಬದುಕಿದ್ದೀರಿ.. ಎಲ್ಲವನ್ನೂ ಇಲ್ಲಿಂದಲೇ ಪಡೆದಿದ್ದೀರಿ ಇದನ್ನು ಮರೆಯಬೇಡಿ ಎಂದು ಕುಟುಕಿದರು.
ರೈತರ ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳುತ್ತಿದ್ದೀರಿ ಆದರೆ ಇನ್ನೂ ರೈತರ ಖಾತೆಗೆ ಹಣ ಬಂದಿಲ್ಲ… ಜೂನ್-28 ರಂದು ಘೋಷಣೆ ಮಾಡಿದ್ದೀರ ಆದರೆ ಏಪ್ರಿಲ್ ಬಂದ್ರೂ ಬ್ಯಾಂಕ್ ಗೆ ಹಣ ನೀಡಿಲ್ಲ ಮೇ ನಲ್ಲಿ ಚುನಾವಣೆ ನಡೆಯುತ್ತೆ ಇನ್ನೂ 6.5 ಕೋಟಿ ಹಣ ಬಾಕಿಯಾಗಿರುತ್ತದೆ ಮುಂದಿನ ಮುಖ್ಯಮಂತ್ರಿ ನಿಮ್ಮ ಸಾಲ ಮನ್ನಾ ತೀರಿಸಬೇಕು ಅಲ್ವಾ… ಮುಂದಿನ ಮುಖ್ಯಂತ್ರಿ ನಾನೇ… ನಾನು ಅಧಿಕಾರ ಸ್ವೀಕರಿಸಿದೆ 25 ದಿನದಲ್ಲೇ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುತ್ತೀನೆ. 4300 ಕೋಟಿ ಸ್ತ್ರೀ ಶಕ್ತಿ ಮತ್ತು 51 ಸಾವಿರ ರೈತರ ಸಾಲ ಮನ್ನಾವನ್ನು ನಾನು ಮಾಡಿ ತೋರಿಸುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.
ಕೇವಲ ಎಸ್ ಸಿ/ಎಸ್ ಟಿಗೆ ಇರುವ ಗಂಗಾಕಲ್ಯಾಣ ಯೋಜನೆಯನ್ನು ಎಲ್ಲಾ 2.5 ಹೆಕ್ಟೇರ್ ಬೂಮಿಯಿರುವ ಎಲ್ಲಾ ರೈತರಿಗೂ ನೀಡುತ್ತೇನೆ... ಜೆಡಿಎಸ್ ನವರು ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ನೀಡಿ ಎಂದು ಹೇಳಬೇಡಿ ಕೊನೆಯ ಪಕ್ಷ ದಲಿತರಿಗೆ ಒಂದು ಡಿಸಿಎಂ ಸ್ಥಾನವನ್ನೂ ನೀಡಲಿಲ್ಲ... ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ದಲಿತರಿಗೆ ಡಿಸಿಎಂ ಸ್ಥಾನ ಆದ್ರೆ ಯಾವುದೇ ನೈತಿಕತೆಯಿಲ್ಲದೇ ನೀವೇ ಮತ್ತೆ ಮುಖ್ಯಮಂತ್ರಿ ಎಂದು ಹೇಗೆ ಹೇಳತೀರಾ ಸಿದ್ದರಾಮಯ್ಯ... ಎಂದು ಪ್ರಶ್ನಿಸಿದರು.
ಮೋದಿ ಸಿದ್ದರಾಮಯ್ಯರ ಸರ್ಕಾರಕ್ಕೆ ಶೇ.10 ಸರ್ಕಾರ ಎಂತಾರೇ… ಮೋದಿಯವನ್ನು ಸಿದ್ದರಾಮಯ್ಯ ಶೇ. 90 ಎನ್ನುತ್ತಾರೆ ಇವೆಲ್ಲಾ ಪರಸೆಂಟ್ ಹೋಗಲು ಜೆಡಿಎಸ್ ಬೆಂಬಲಿಸಿ ಇದೊಂದು ಬಾರಿ ಅವಕಾಶ ಮಾಡಿಕೊಡಿ ಕೊರಟಗೆರೆ-ಮಧುಗಿರಿ ಜನರ ಋಣ ತೀರಿಸಬೇಕಿದ್ದು ನಾನು ಇವೆಡನ್ನೂ ದತ್ತು ತೆಗೆದುಕೊಳ್ಳತ್ತೇನೆ ಎಂದರು.
ನಾನು ಮರುಜನ್ಮ ಪಡೆದಿದ್ದೇನೆ:- ಇಸ್ರೇಲ್ ಪ್ರವಾಸದ ವೇಳೆಯಲ್ಲಿಯೇ ನಾನು ಮೃತಪಡಬೇಕಿತ್ತು ಆದರೆ ನಿಮ್ಮಲ್ಲರ ಆರೈಕೆ ಮತ್ತು ಪ್ರೀತಿಯಿಂದ ಎರಡು ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬದುಕುಳಿದಿದ್ದೇನೆ, ಚಿಕಿತ್ಸೆ ನಡೆದ 25 ನೇ ದಿನದಿಂದಲೇ ಚುನಾವಣೆಗಾಗಿ ಬೀದಿಗೆ ಬಂದಿದ್ದೇನೆ ನನಗೇನು ಅಧಿಕಾರ ಹಿಡಿದು ಹಣ ಸಂಪಾದಿಸುವ ಅವಶ್ಯಕತೆಯಿಲ್ಲ ನಿಮ್ಮಲ್ಲರ ಮನಸ್ಸಿನಲ್ಲಿ ಸಾಯುವುದರೊಳಗೆ ನನ್ನನ್ನು ನೆನಸಿಕೊಳ್ಳುವಂತೆ ಕೆಲಸ ಮಾಡಿ ಹೋಗಬೇಕು ಎನ್ನುವ ಇರಾದೆಯಿಂದ ಚುನಾವಣೆಗೆ ಬಂದಿದ್ದೇನೆ.
ನಮ್ಗೆ ನೀವೇ ಹೈಕಮಾಂಡ್:- ರಾಷ್ಟ್ರೀಯ ಪಕ್ಷಗಳು ರಾಜ್ಯದಲ್ಲಿರುವಂತಹ ಹಣವನ್ನು ಲೂಟಿ ಮಾಡಿ ಹೈಮಾಂಡ್ ಗೆ ಕಪ್ಪ ನೀಡಬೇಕು ಇದಕ್ಕಾರಿ ಅವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ನಿಮ್ಮ ಜೆಡಿಎಸ್ ಪಕ್ಷಕ್ಕೆ ಯಾರೂ ಹೈಕಮಾಂಡ್ ಇಲ್ಲ ನಿವೇ ಪಕ್ಷದ ಹೈ ಕಮಾಂಡ್ ನಾವು ಯಾರಿಗೂ ಹಣ ಕೊಡುವ ಅವಶ್ಯಕತೆಯಿಲ್ಲ… ನಿಮ್ಮ ಸೇವೆ ಮಾಡಿದರಷ್ಟೇ ಸಾಕು ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಿ.
ದೇವೇಗೌಡ ಕೊನೆ ಚುನಾವಣೆ:- ನಿಮ್ಮಲ್ಲರ ಪಕ್ಷ … ನೀವು ಬೆಳೆಸಿರುವಂತಹದ್ದು.. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದನ್ನು ನೋಡಲು ಇಳಿ ವಯಸ್ಸಿನಲ್ಲೂ ದೇವೇಗೌಡರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ನಿಮ್ಮಲ್ಲರ ಸಹಕಾರ ನೀಡಬೇಕು ಅಧಿಕಾರಕ್ಕೆ ಬರಲು ಸಹಕರಿಸಬೇಕು. ದೇವೇಗೌಡರ ಕನಸು ಫಲಿಸುವುದಿಲ್ಲ ಎಂದು ವ್ಯಂಗ್ಯವಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ತಕ್ಕ ಪಾಠ ಕಲಿಸಬೇಕು.
ವಿರೋಧ ಪಕ್ಷದ ಶಾಸಕರಾಗಿ ಮಾಡೋದು ಕಷ್ಟ:- ಯಾವುದೇ ಕ್ಷೇತ್ರದಲ್ಲಿ ಶಾಸಕನಾದರೆ ಅವರ ಪಕ್ಷದ ಸರ್ಕಾರ ಅಧಿಕಾರದಲ್ಲಿಲ್ಲದಿದ್ದರೆ ಅವರಿಗೆ ಆಡಳಿತ ಸರ್ಕಾರ ಸಹಕರಿಸುವುದಿಲ್ಲ ,ಸ್ಪಂದಿಸುವುದಿಲ್ಲ..ನೀವು ಯಾವುದಾದರೂ ವಿಚಾಕ್ಕೆ ಶಾಸಕರ ಮೇಲೆ ಅಸಮಾದಾನ ಮಾಡಿಕೊಂಡಿದ್ದರೆ ಅದನ್ನು ಮರೆತುಬಿಡಿ ವಿರೋಧ ಪಕ್ಷ ಶಾಸಕರ ಕೆಲಸ ಕಷ್ಟ ಈ ಬಾರಿ ಸಂಪೂರ್ಣ ಸಹಕಾರ ನೀಡಿ ನಿಮ್ಮೆಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇನೆ.
ಕುರುಬ ಸಮುದಾಯಕ್ಕೆ ಏನು ಮಾಡೋಲ್ಲ:- ಸಿದ್ದರಾಮಯ್ಯ ಗೆಲ್ಲಲಿ ಎಂದು ಬಹಳಷ್ಟು ಜನರು ಕುರಿ ಮಾರಿ ಹಣ ನೀಡಿ ಗೆಲ್ಲಿಸಿದ್ರು ಆದ್ರೆ ಸಿದ್ದರಾಮಯ್ಯ ಸಮುದಾಯಕ್ಕೆ ಏನೇನನ್ನೂ ಮಾಡಿಲ್ಲ… ಕುರುಬರು ಇವರನ್ನು ನಂಬಬಾರದು. ಸಿದ್ದರಾಮಯ್ಯನನ್ನು ನಂಬಿ ಕಾಂಗ್ರೇಸ್ ಮತ ಹಾಕಬೇಡಿ ಜಾತ್ಯಾತೀತ ನೆಲೆಗಟ್ಟಿನಲ್ಲಿರುವ ಜೆಡಿಎಸ್ ಬೆಂಬಲಿಸಿ
Comments