ಶೀಘ್ರವೇ ಸತ್ಯಾಂಶ ಹೊರ ಬರಲಿದೆ : ಸಿದ್ದರಾಮಯ್ಯ ವಿರುದ್ಧ ಎಚ್ ಡಿಕೆ ಬಾಂಬ್
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ಆಯೋಜಿಸಿರುವ ವಿಕಾಸ ಪರ್ವ ಯಾತ್ರೆಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರೆಸಾರ್ಟ್ನಲ್ಲಿ ಕುಳಿತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣ ಹಂಚಲು ಬಂಡಲು ಕಟ್ಟುತ್ತಿದ್ದಾರೆ. ಯಾವ ಸ್ಥಳಗಳಿಗೆ ಹಣ ಹಂಚಬೇಕು ಎಂದು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಅವರು ಮಾತನಾಡುತ್ತ ಮುಖ್ಯಮಂತ್ರಿಗಳು ಬೇರೆ ಪಕ್ಷದ ನಾಯಕರನ್ನ ರೆಸಾರ್ಟ್ ಗೆ ಕರೆಸಿಕೊಂಡು ಹಣ, ಆಮೀಷ ನೀಡಿ ಖರೀದಿಸಲು ಹೊರಟಿದ್ದು, ಅದ್ಯಾವುದು ನಡೆಯೋದಿಲ್ಲ, ಅದು ವ್ಯರ್ಥ ಪ್ರಯತ್ನವಾಗುತ್ತದೆ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಎರಡು ಸಾವಿರ ಕೋಟಿ ರೂಪಾಯಿ ಹಗರಣದ ಆರೋಪ ಇರುವುದು ಸತ್ಯ. ಅವರನ್ನ ರಕ್ಷಿಸಿಕೊಳ್ಳಲು ಕೆಂಪಣ್ಣ ಆಯೋಗ ರಚಿಸಿದ್ದಾರೆ. ಕೆಂಪಣ್ಣ ಆಯೋಗ ರಚನೆಯಾಗಿ ಮೂರು ವರ್ಷ ಆಯ್ತು. ಆಯೋಗ ಏನು ವರದಿ ಕೊಟ್ಟಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಸ್ವಲ್ಪ ದಿನದಲ್ಲೇ ಹೊಸ ಸರ್ಕಾರ ಬರುತ್ತದೆ ಹೊಸ ಸರ್ಕಾರ ಬಂದ ಮೇಲೆ ಸತ್ಯಾಂಶ ಹೊರ ಬರಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದರು.
Comments