ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಂಪರ್ ಆಫರ್ ಕೊಟ್ಟ ದೇವೇಗೌಡ್ರು

31 Mar 2018 3:53 PM |
15624 Report

ರಾಜ್ಯ ವಿಧಾನಸಭೆಗೆ ಟಿಕೆಟ್ ಸಿಗದ ಬೇಸರದಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಜೆಡಿಎಸ್ ವರಿಷ್ಠ ದೇವೇಗೌಡರು ಬಂಪರ್ ಕೊಡುಗೆ ನೀಡುವ ಸುಳಿವು ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸ್ಥಾನ ಸಿಗದ ಬೇಸರದಲ್ಲಿ ಪ್ರಜ್ವಲ್ ಇದ್ದಾನೆ. ಆತ ವಿಧಾನಸಭೆಗೆ ಸ್ಪರ್ಧಿಸುವುದು ಬೇಡ. ಲೋಕಸಭೆಗೆ ಹೋಗಲಿ. ಲೋಕಸಭೆ ಚುನಾವಣೆಗೆ ಹಾಸನದಿಂದ ಸ್ಪರ್ಧಿಸಲಿ ಎಂದು ದೇವೇಗೌಡರು ಹೇಳಿದ್ದಾರೆ.

ನನಗೆ ಹೇಗೂ ವಯಸ್ಸಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಇಲ್ಲ. ಹೀಗಾಗಿ ಹಾಸನ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಲು ತಯಾರು ನಡೆಸಿ ಎಂದು ಸ್ಥಳೀಯ ನಾಯಕರಿಗೆ ಸೂಚಿಸಿದ್ದೆ. ಆದರೆ ಯಾರೂ ತಯಾರಿಲ್ಲ. ಹೀಗಾಗಿ ಪ್ರಜ್ವಲ್ ಇಲ್ಲಿಂದ ಸ್ಪರ್ಧಿಸಲಿ ಎಂದು ದೇವೇಗೌಡರು ಹೇಳಿದ್ದಾರೆ. ಈ ಮೂಲಕ ಅಸಮಾಧಾನಗೊಂಡಿರುವ ಪ್ರಜ್ವಲ್ ಗೆ ಬಂಪರ್ ಆಫರನ್ನೇ ಕೊಟ್ಟಿದ್ದಾರೆ. 

Edited By

Shruthi G

Reported By

hdk fans

Comments