ಸಿದ್ದರಾಮಯ್ಯ ನವರ ರಾಜಕೀಯದ ಬಗ್ಗೆ ಭವಿಷ್ಯ ವಾಣಿ ನುಡಿದ ದೇವೇಗೌಡ್ರು...!!

ಪಟ್ಟಣದಲ್ಲಿ ನಡೆದ ಕುಮಾರಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು,ತನ್ನ ಮಾತೃ ಪಕ್ಷ ಜೆಡಿಎಸ್ ಅನ್ನು ಮುಗಿಸಲು ಹೊರಟಿರುವ ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯ ಸನ್ನಿಹಿತವಾಗಿದೆ ಎಂದು ಭವಿಷ್ಯ ನುಡಿದರು. ಜೆಡಿಎಸ್ ಅಪ್ಪಮಕ್ಕಳ ಪಕ್ಷ ಅಲ್ಲ. ಬಡವರ, ದಲಿತರ, ಕಾರ್ಮಿಕರಿಗಾಗಿ ಹುಟ್ಟಿರುವ ಪಕ್ಷವೆಂದರು. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಬೆಳೆಸಿದ್ದು ಜೆಡಿಎಸ್. ಅವರನ್ನು ಮುಖ್ಯಮಂತ್ರಿ ಮಾಡಿಸಲು ಸೋನಿಯಾ ಗಾಂಧಿಗೆ ಕೈಮುಗಿದದ್ದು ನಾನು. ಇದನ್ನು ಮರೆತರೆ ಸಿದ್ದರಾಮಯ್ಯ ರಾಜಕೀಯ ಅಂತ್ಯ ಕಾಣುತ್ತಾರೆ ಎಂದು ಅವರು ಎಚ್ಚರಿಸಿದರು."
ಡಿ.ಕೆ.ಶಿವಕುಮಾರ್ ಬರೆದುಕೊಟ್ಟಂತೆ ಓದಿದ ರಾಹುಲ್ ಗಾಂಧಿ ಜೆಡಿಎಸ್ ಸಂಘಪರಿವಾದ ಟೀಮ್ ಎಂದು ಕಠಿಣವಾಗಿ ಟೀಕಿಸಿದ್ದಾರೆ. ಜೆಡಿಎಸ್ ಬಗ್ಗೆ ಮಾತನಾಡಲು ರಾಹುಲ್ ಯಾರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಪುಟ್ಟರಾಜು ಅವರನ್ನು ತುಳಿಯಲು ಚಲುವರಾಯಸ್ವಾಮಿ ಸಾಕಷ್ಟು ಬಾರಿ ಪ್ರಯತ್ನಿಸಿದರು. ಎಸ್.ಡಿ.ಜಯರಾಂ ಪುತ್ರ ಅಶೋಕ್ ಜಯರಾಂಗೆ ಟಿಕೆಟ್ ತಪ್ಪಿಸಿದರು ಎಂದು ಅವರು ಆರೋಪಿಸಿದರು. ಜೆಡಿಎಸ್ ಅಭ್ಯರ್ಥಿ ಕೆ.ಸುರೇಶ್‍ಗೌಡರನ್ನು ಗೆಲ್ಲಿಸುವ ಮೂಲಕ ಒಬ್ಬ ಸಾಮಾನ್ಯ ಗುತ್ತಿಗೆದಾರನಾಗಿದ್ದವನಿಗೆ ಎಲ್ಲವನ್ನೂ ನೀಡಿ ಬೆಳೆಸಿದ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಉತ್ತರ ನೀಡಬೇಕು ಎಂದು ಅವರು ಕರೆ ನೀಡಿದರು. ತಮಿಳುನಾಡು ಸರಕಾರ ನೀರಿನ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿದೆ. ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯ ನೋಡಿ ನಿದ್ರೆ ಬರುತ್ತಿಲ್ಲ. ಇರುವಷ್ಟು ದಿನ ರಾಜ್ಯದ ಜನರಿಗಾಗಿ ಹೋರಾಡುತ್ತೇನೆ ಎಂದು ಅವರು ಹೇಳಿದರು. ತನ್ನ ಸರಕಾರ ಅಸ್ತಿತ್ವಕ್ಕೆ ಬಂದರೆ ರೈತರ ಎಲ್ಲಾ ಸಾಲಮನ್ನಾ ಜತೆಗೆ ಸಾಲದಿಂದ ಮುಕ್ತಿಗೊಳಿಸಲು ಹೊಸ ಕೃಷಿ ನೀತಿ ಜಾರಿ ಮಾಡುತ್ತೇನೆ. ಕಾವೇರಿ ನೀರು ಉಳಿಸಲು, ಮಹಾದಾಯಿ ನೀರು ಹರಿಸಲು, ರೈತರ ಸರಕಾರಕ್ಕಾಗಿ, ರಾಜ್ಯದ ಉಳಿವಿಗಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. ರೈತರ ಸಾಲಮನ್ನಾದ 8,160 ಕೋಟಿ ರೂ.ಗಳಲ್ಲಿ ಕೇವಲ 1,300 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿದ ಹಣವನ್ನು ಜೂನ್‍ನಲ್ಲಿ ಕೊಡುತ್ತಾರಂತೆ. ಅವರ ಪಕ್ಷ ಅಧಿಕಾರಕ್ಕೆ ಬಂದರ ತಾನೆ ಕೊಡುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
Comments