ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯದ ಬಗ್ಗೆ ಅಚ್ಚರಿ ಸುಳಿವು ಕೊಟ್ಟ ದೇವೇಗೌಡ್ರು..!!

30 Mar 2018 12:58 PM |
16356 Report

ನಾನು‌ ಮುಂದಿನ ಲೋಕಸಭೆ ಚುನಾವಣೆಗೆ ನಿಲ್ಲಲ್ಲ. ನನಗೂ 85 ವರ್ಷ. ಹೋರಾಟದ ಛಲ ಇದೆ. ಆದರೆ ವ್ಹೀಲ್ ಚೇರ್'ನಲ್ಲಿ ಸಂಸತ್‌ಗೆ ಹೋಗಲು ಬಯಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಪ್ರಜ್ವಲ್ ರೇವಣ್ಣ ಮುಂದಿನ ಲೋಕಸಭೆ ಚುನಾವಣೆ ಅಭ್ಯರ್ಥಿ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಹೇಳಿದ್ದಾರೆ. ಪ್ರಜ್ವಲ್‌ ವಿದ್ಯಾವಂತ,ಬುದ್ದಿವಂತ‌. ಪ್ರಜ್ವಲ್ ಗೆ ಮಾರ್ಗದರ್ಶನ ಮಾಡುತ್ತೇನೆ ಎಂದು ದೇವೇಗೌಡ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತವರು ಜಿಲ್ಲೆಯಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ತಮ್ಮ ಉತ್ತಾರಾಧಿಕಾರಿ ಎಂಬುದನ್ನು ಪರೋಕ್ಷವಾಗಿ ಹೇಳಿದರು. ನನ್ನ ಕ್ಷೇತ್ರದಿಂದ ಪಕ್ಷದ ಬೇರೆ ನಾಯಕರು ಸ್ಪರ್ಧಿಸಿದರೆ ಸ್ವಾಗತ. ಇಲ್ಲವಾದರೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಮೊಮ್ಮಗ ಪ್ರಜ್ವಲ್ ರನ್ನು ಲೋಕಸಭೆಗೆ ಕಳುಹಿಸುವ ಆಸೆ ಇದೆ ಎಂದು ದೇವೇಗೌಡರು ಹೇಳಿದರು. ನನ್ನ ಬಿಟ್ಟು ಬೇರೆಯವರು ಸ್ಪರ್ಧೆ ಮಾಡಿದ್ರೆ ಸ್ವಾಗತ. ಇಲ್ಲವಾದರೆ ಪ್ರಜ್ವಲ್ ನನ್ನು ಮಗನೆಂದು ತಿಳಿದು ಕ್ಷೇತ್ರದ ಜನ ಗೆಲ್ಲಿಸಲಿ ಎಂದರು. ತವರು ಜಿಲ್ಲೆಯಲ್ಲಿ ತಮ್ಮ ಉತ್ತರಾಧಿಕಾರಿ ಮೊಮ್ಮಗ ಪ್ರಜ್ವಲ್ ಎಂಬ ಸುಳಿವನ್ನು ನೀಡಿದರು. 

113 ಸ್ಥಾನ ಗೆಲ್ಲುವುದು ನನ್ನ ಟಾರ್ಗೆಟ್, ಚುನಾವಣೆಗೆ ಇನ್ನೂ 45 ದಿನ ಬಾಕಿ ಇದೆ. ಅಷ್ಟೂ ದಿನ ವಿರಮಿಸದೇ ರಾಜ್ಯ ಸುತ್ತುತ್ತೇನೆ. ರಾಜ್ಯಕ್ಕೆ ನಾನೂ ಅಲ್ಪ-ಸ್ವಲ್ಪ ಕೆಲಸ ಮಾಡಿದ್ದೇನೆ. ಸಾಮಾಜಿಕ ನ್ಯಾಯದ ಬಗ್ಗೆ ಬೇರೆಯವರಿಂದ ಹೇಳಿಸಿಕೊಳ್ಳಬೇಕಿಲ್ಲ. ನಮ್ಮ ಪಕ್ಷದಲ್ಲಿ ಹಣದ ಕೊರತೆ ಇದೆ, ಆದರೆ ಹೋರಾಟ ನಿಲ್ಲಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು. ಇನ್ನು ಜೆಡಿಎಸ್ ಪಕ್ಷ ತೊರೆಯುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕುಮಾರಸ್ವಾಮಿಯನ್ನು ನಾನು ಸಿಎಂ ಮಾಡಬೇಕು ಎನ್ನುತ್ತಿಲ್ಲ, ಜನರ ಬಾಯಲ್ಲಿ ಆ ಮಾತ್ತಿದೆ ಎಂದು ತಿಳಿಸಿದರು. 

ಅಮಿತ್ ಶಾ ಮೈಸೂರು ರಾಜವಂಶಸ್ಥರನ್ನು ಯಾಕಾಗಿ ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಇನ್ನು ಶಾ ದಲಿತರ ಜೊತೆ ಬೋಜನ ಮಾಡುತ್ತಿದ್ದಾರೆ. ಈಗಲಾದರೂ ಅವರಿಗೆ ಈ ಬುದ್ಧಿ ಬಂದಿದ್ದಕ್ಕೆ ಸಂತೋಷ. ಇದು‌ ನನ್ನ ಕೊನೆಯ‌‌‌ ಚುನಾವಣೆ ಎಂಬ ಸಿಎಂ ‌ಸಿದ್ದರಾಮಯ್ಯ ಹೇಳಿಕೆಗೆ ದೇವೇಗೌಡರು ವ್ಯಂಗ್ಯವಾಡಿದರು. ಈ‌ ರೀತಿಯ ಹೇಳಿಕೆಯನ್ನು ಯಾರೂ‌ ಗಂಭೀರವಾಗಿ ತೆಗೆದುಕೊಳ್ಳಬಾರದು. ಕಳೆದ ಬಾರಿಯೂ ಸಿದ್ದರಾಮಯ್ಯ ಹೀಗೆ ಹೇಳಿದ್ದರು. ಅವರ ಬಳಿ ಅಧಿಕಾರ ಇದೆ, ಅದಕ್ಕೆ ಯಾರು ಏನೇ‌ ಮಾಡಿದ್ರು ಗೆದ್ದೇ ಗೆಲ್ಲುವೆ ಎನ್ನುತ್ತಿದ್ದಾರೆ. ನಾನು‌ ನಮ್ಮ ಅಭ್ಯರ್ಥಿ ಜಿ.ಟಿ. ದೇವೇಗೌಡರ ಪರ ಹೋರಾಟ ಮಾಡುವೆ ಎಂದರು. 

 

Edited By

Shruthi G

Reported By

hdk fans

Comments