ಕಾನೂನು ಎಷ್ಟೇ ಕಠಿಣವಾಗಿದ್ದರೂ ದೌರ್ಜನ್ಯಗಳಾಗುತ್ತಿರುವುದು ದುರಂತ
ಮಹಿಳಾ ದಿನಾಚರಣೆ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗದೆ ಪುರುಷರ ಪಾಲ್ಗೋಳ್ಳುವಿಕೆಗೆ ಪ್ರಾಧಾನ್ಯತೆ ದೊರೆಯಬೇಕು, ಪುರಾತನ ಕಾಲದಿಂದ ಕೋಣೆಗೆ ಮೀಸಲಾಗಿ ಮಹಿಳೆ ಜೀವನ ಸಾಗಿಸುತ್ತಿದ್ದಾಳೆ, ಪರಂಪರೆಯಲ್ಲಿ ಎರಡು ಮಾದರಿ ಸ್ತ್ರೀಯರನ್ನು ಗಮನಿಸಬಹುದು, ಸೀತೆ ಹೆಣ್ಣಿಗೆ ಮಾದರಿಯಾದರೆ, ಮತ್ತೊಂದೆಡೆ ದ್ರೌಪದಿ ಕಾಣಸಿಗುತ್ತಾಳೆ, ನಗರದ ಕಸ್ತೂರಬಾ ಶಿಶುವಿಹಾರ ಮಹಿಳಾ ಸಮಾಜ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆ ವಿಜೇತರಿಗೆ ಗುರುವಾರ ಬಹುಮಾನ ವಿತರಿಸಿ ಮಾತನಾಡುತ್ತಾ ಲೇಖಕಿ ಡಾ|| ಎಂ.ಎಸ್.ಆಶಾದೇವಿ ಹೇಳಿದರು. ರೈತ ಮುಖಂಡೆ ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿ ಮಹಿಳೆಗೆ ಪ್ರಸ್ತುತ ಎಲ್ಲ ರಂಗಗಳಲ್ಲೂ ಉತ್ತಮ ಸ್ಥಾನಮಾನ ಲಭ್ಯವಾಗುತ್ತಿದೆ, ಕಾನೂನು ಎಷ್ಟೇ ಕಠಿಣವಾಗಿದ್ದರೂ ದೌರ್ಜನ್ಯಗಳಾಗುತ್ತಿರುವುದು ದುರಂತ ಎಂದರು. ಮಹಿಳಾ ಠಾಣೆ ಆರಕ್ಷಕ ಉಪನಿರೀಕ್ಷಕಿ ಬೇಬಿವಾಲೇಕರ್, ಮಹಿಳಾ ಸಮಾಜ ಅಧ್ಯಕ್ಷೆ ಕೆ.ಎಸ್.ಪ್ರಭಾ, ಉಪಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ದೇವಕಿ, ನಿರ್ದೇಶಕರಾದ ವತ್ಸಲಾ, ನಿರ್ಮಲಾ, ಗೌರಮ್ಮ, ಗಿರಿಜಾ, ವರಲಕ್ಷ್ಮಿ ಹಾಜರಿದ್ದರು.
Comments