ವೀರಶೈವ-ಲಿಂಗಾಯಿತ ಎರಡೂ ಬೇರೆಯಲ್ಲ , ಸ್ವಾರ್ಥಕ್ಕಾಗಿ ಇಬ್ಬಾಗ ಮಾಡಿದ್ದಾರೆ!




ನಗರದ ಜೆಪಿ ಪ್ಯಾಲೇಸ್ ನಲ್ಲಿ ಗುರುವಾರ ವೀರಶೈವ-ಲಿಂಗಾಯಿತ ಸಂಘದ ಜಿಲ್ಲಾಮಟ್ಟದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ ವೀರಶೈವ-ಲಿಂಗಾಯಿತ ಎರಡೂ ಬೇರೆಯಲ್ಲ ಕೆಲವರು ಸ್ವಾರ್ಥಕ್ಕಾಗಿ ಇಬ್ಬಾಗ ಮಾಡಿದ್ದಾರೆ, ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು, ಎಲ್ಲಾ ಜಾತಿಗಳಲ್ಲಿ ಇರುವಂತೆ ವೀರಶೈವ-ಲಿಂಗಾಯಿತರಲ್ಲೂ ಒಳ ಪಂಗಡಗಳಿವೆ, ಇತ್ತೀಚೆಗೆ ಒಂದಾಗಿದ್ದು ಕೊಡು ಕೊಳ್ಳುವ ಸಂಭದ ಬೆಳೆಸಿದ್ದಾರೆ ಎಂದು ಅಖಿಲ ಭಾತರ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಎಸ್.ನಟರಾಜ್ ತಿಳಿಸಿದರು. ದೇವನಹಳ್ಳಿ ವೀರಶೈವ-ಲಿಂಗಾಯಿತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ರಮೇಶ್ ಮಾತನಾಡಿ ಪ್ರತ್ಯೇಕ ಧರ್ಮ ಕುರಿತು ದ್ವಂದ್ವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗಿದೆ, ಎಲ್ಲ ತಾಲ್ಲೂಕು ಸಂಘಗಳು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಪ್ರತ್ಯೇಕ ಧರ್ಮ ಸ್ಥಾನ ನೀಡುವುದಾದರೆ ಎರಡನ್ನೂ ಒಟ್ಟಿಗೆ ಸೇರಿಸಿ ನೀಡಬೇಕು ಎಂದು ಸಲಹೆ ನೀಡಿದರು. ವೀರಶೈವ-ಲಿಂಗಾಯಿತ ಸಂಘದ ತಾಲ್ಲೂಕು ಅಧ್ಯಕ್ಷ ಸೋಮರುದ್ರಶರ್ಮ, ಗೌ. ಅಧ್ಯಕ್ಷ ಶಿವಾನಂದಪ್ಪ, ಪ್ರಧಾನ ಕಾರ್ಯದರ್ಶಿ ಪುಟ್ಟಬಸವರಾಜು, ಮುಖಂಡರಾದ ಲೀಲಾ ಮಹೇಶ್, ಎಸ್.ದಯಾನಂದ್, ಟಿಎಸ್.ರುದ್ರಪ್ಪ, ಲೋಕೇಶ್, ಸೋಮನಾಥ್, ಮಹಾಲಿಂಗಯ್ಯ ಹಾಜರಿದ್ದರು.
Comments