50 ನೇ ಮಕ್ಕಳ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ
ದೊಡ್ಡಬಳ್ಳಾಪುರ ನಗರದ ರಂಗಪ್ಪ ಸರ್ಕಲ್ ಬಳಿ ಇರುವ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ [ರಿ.] ಇವರ ವತಿಯಿಂದ ದಿನಾಂಕ 1-4-2018 ಭಾನುವಾರದಂದು ಬೆಳಿಗ್ಗೆ 10 ರಿಂದ ಮಧ್ಯಾನ್ಹ 2 ರವರೆಗೆ ಉಚಿತ ಮಕ್ಕಳ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ, ಹಾಗೂ ಇದೇ ಸಂದರ್ಭದಲ್ಲಿ ಸಾಯಿ ಮಂದಿರಕ್ಕೆ ಸೇವೆಸಲ್ಲಿಸಿರುವ ಮಹನೀಯರಾದ ಡಾ|| ಟಿ ವೇಣುಗೋಪಾಲ್, ಮಕ್ಕಳ ತಜ್ಞರು, ಡಾ|| ಎ.ಎಲ್.ಅನಸೂಯ, ದಂತ ವೈದ್ಯರು, ಶ್ರೀ ವರದರಾಜು, ಶ್ರೀ ಟಿ.ಜಿ.ಚಿಕ್ಕಣ್ಣ, ಸಾಫ್ಟ್ ವೇರ್ ಇಂಜಿನಿಯರ್, ದೊಡ್ದಬಳ್ಳಾಪುರ ಹಾಗೂ ಪ್ರೊಫೆಸರ್ ಆರ್. ವಿಷಕಂಠ,ಛೇರ್ಮನ್, ಸಾಯಿ ಮಂದಿರ, ಮಲ್ಲೇಶ್ವರಂ, ಶ್ರೀ ಕೆ. ವಿಠಲ್ ಮೂರ್ತಿ, ಆರ್ಕಿಟೆಕ್, ಶ್ರೀ ರಾಮಪ್ಪ, ಇಂಜಿನಿಯರ್ ಬೆಂಗಳೂರು ಇವರನ್ನು ಸನ್ಮಾನಿಸುವ ಕಾರ್ಯಕ್ರಮ ಇರುತ್ತದೆ, ವಿಶೇಷ ಆಹ್ವಾನಿತರಾಗಿ ಶ್ರೀ ತ.ನ.ಪ್ರಭುದೇವ್, ನಗರಸಭಾಧ್ಯಕ್ಷರು, ದೊಡ್ಡಬಳ್ಳಾಪುರ ಆಗಮಿಸುತ್ತಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹೆಚ್.ಪಿ.ಶಂಕರ್, ಗೌ|| ಅಧ್ಯಕ್ಷರು, ಶ್ರೀ ಶಿರ್ಡಿ ಸಾಯಿ ಮಂದಿರ, ಇವರು ವಹಿಸಲಿದ್ದಾರೆ. ಶಿಬಿರದ ಪ್ರಾಯೋಜಕರು: ಶ್ರೀ ಪಿ.ಸಿ.ವೆಂಕಟೇಶ ಮತ್ತು ಕುಟುಂಬದವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ದಿನಾಂಕ ೨೯ ಮಾರ್ಚ್ ಗುರುವಾರ ಶ್ರೀ ಸಾಯಿ ಮಂದಿರದ ಆರನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೆಡೆಯಿತು, ಬೆಳಿಗ್ಗೆ ಆರರಿಂದ ರಾತ್ರಿ ಹತ್ತರವರೆಗೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಮಾಡಿ ಪ್ರಸಾದ ಪಡೆದರು, ವಾರ್ಷಿಕೋತ್ಸವದ ಅಂಗವಾಗಿ ವಿವಿದ ಮಹಿಳಾ ಮಂಡಲಿಗಳಿಂದ ಕಿರ್ತನೆ ಮತ್ತು ಭಜನೆಗಳನ್ನು ಎರ್ಪಡಿಸಲಾಗಿತ್ತು.
Comments