ಕುಮಾರ್ ಬಂಗಾರಪ್ಪನವರ ಹೇಳಿಕೆಗೆ ಟಾಂಗ್ ಕೊಟ್ಟ ಜೆಡಿಎಸ್ ನಾಯಕ ಮಧು ಬಂಗಾರಪ್ಪ..!!

ಕುಟುಂಬವನ್ನ ರಾಜಕಾರಣಕ್ಕೆ ಎಳೆದು ತರುವುದು ಕುಮಾರ್ ಬಂಗಾರಪ್ಪನವರ ಕೆಟ್ಟ ಚಾಳಿ, ಆತನ ಹೇಳಿಕೆಗಳಿಗೆ ನಾನು ಕಮೆಂಟ್ ಮಾಡುವುದಿಲ್ಲ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಕುಮಾರ್ ಬಂಗಾರಪ್ಪ ವಿರುದ್ಧ ಹರಿಹಾಯ್ದರು.
ಪ್ರೆಸ್ ಟ್ರಸ್ಟ್‌ನಲ್ಲಿ ನಡೆದ ಮಾಧ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರ ಬಂಗಾರಪ್ಪ ಸ್ಯಾಡಿಸ್ಟ್ ಎಂದು ಜರಿದರು. ಪ್ರತಿ ಬಾರಿಯೂ ಕುಟುಂಬದ ಬಗ್ಗೆ ಇಲ್ಲಸಲ್ಲದ ಮಾತನಾಡುವುದು ಕುಮಾರ್ ಬಂಗಾರಪ್ಪ. ನಾಲ್ಕು ವರ್ಷಗಳ ಹಿಂದೆ ಈ ವಿಷಯಗಳನ್ನೇ ಎತ್ತಿಕೊಂಡು ಬಂದಿದ್ದರು. ಅಮವಾಸೆ-ಹುಣ್ಣಿಮೆ ಬಂದಾಗ ವೀರಪ್ಪನ್‍ಗೆ ತಲೆಕೆಡುತ್ತಿತ್ತಂತೆ. ಹಾಗೆ ಈತನಿಗೂ ಕೂಡ ಆಗುತ್ತದೆ ಎಂದು ಮಧು ವ್ಯಂಗ್ಯವಾಡಿದರು. ರಾಜ್‍ಕುಮಾರ್ ಕುಟುಂಬದ ಬಗ್ಗೆ ಮಾತನಾಡಿರುವುದು ಸರಿಯಿಲ್ಲ. ನಾವೆಲ್ಲರೂ ಚೆನ್ನಾಗಿದ್ದೇವೆ, ರಾಜಕಾರಣಕ್ಕೆ ಕುಟುಂಬದ ವಿಚಾರ ಎಳೆತರುವುದು ಬೇಡ. ರಾಜ್‍ಕುಮಾರ್ ಕುಟುಂಬದ ವಕ್ತಾರ ನಾನಲ್ಲ. ದಯವಿಟ್ಟು ಮಾಧ್ಯಮಗಳಲ್ಲಿ ಈ ತರಹದ ವಿಷಯ ಹಾಕಬೇಡಿ ಎಂದು ಶಾಸಕ ಮಧು ಬಂಗಾರಪ್ಪ ಮನವಿ ಮಾಡಿದರು.
Comments