ಬಿಜೆಪಿಯ ಕೈವಾಡವನ್ನು ಬಯಲು ಮಾಡಿದ ಜೆಡಿಎಸ್ ನಾಯಕ ಮಧು ಬಂಗಾರಪ್ಪ...!!
ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಮಾಡುವ ನೆಪದಲ್ಲಿ ಜಿಲ್ಲೆಯ ಇಬ್ಬರು ನಾಯಕರ ಸಂಧಾನ ನಡೆಸಲಾಗಿದೆ. ಕೇಂದ್ರ ಸರ್ಕಾರ ಅಡಿಕೆ ಆರೋಗ್ಯಕ್ಕೆ ಮಾರಕ ಎಂದು ಹೇಳಿದ ಮೇಲೆಯೆ ಅಡಿಕೆ ಬೆಳೆಗೆ ಬೆಲೆ ಕಡಿಮೆಯಾಗಿದ್ದು, ರಾಷ್ಟ್ರೀಯ ಪಕ್ಷಗಳಿಂದ ಬೆಳೆಗಾರರನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷದಿಂದ ಮಾತ್ರವೇ ಸಾಧ್ಯ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಮಧು ಬಂಗಾರಪ್ಪ ಅವಳಿ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಅಡಿಕೆ ಬೆಳಗಾರರಿಗೆ ಮೋಸ ಮಾಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಕೇಂದ್ರ ಸರ್ಕಾರ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿತ್ತು. ಸಮಾವೇಶದಲ್ಲಿ ಅಡಿಕೆ ಬೆಳಗಾರರನ್ನು ರಕ್ಷಣೆ ಮಾಡುವ ಯಾವುದೇ ಹೇಳಿಕೆಗಳನ್ನು ಶಾ ನೀಡಿಲ್ಲ. ಅಡಿಕೆ ಬೆಳಗಾರರ ಸಮಾವೇಶ ನೆಪದಲ್ಲಿ ಬಂದು ಇಬ್ಬರು ನಾಯಕರ ಸಂಧಾನವಾಗಿದೆ. ಅಡಿಕೆ ಬೆಳೆಗಾರರನ್ನು ರಕ್ಷಣೆ ಮಾಡಲು ಜೆಡಿಎಸ್ ಪಕ್ಷ ಸದಾಸಿದ್ದ ಎಂದು ಗುಡುಗಿದ್ದಾರೆ. ಭಾಷೆ, ರಾಜಕಾರಣಗಳ ಬಗ್ಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಕರ್ನಾಟಕ ರಾಜ್ಯವನ್ನು ಹಗುರವಾಗಿ ತಗೆದುಕೊಂಡಿವೆ. ಭಾಷಣ ಮಾಡುವಾಗ ರಾಜ್ಯದ ಮಹಾನ್ ನಾಯಕರ ಹೆಸರು ಹೇಳಿರುವ ಅವರು ಮಹದಾಯಿ ನೀರಾವರಿ ವಿಚಾರದ ಬಗ್ಗೆ ಮಾತನಾಡಲಿಲ್ಲ. ರಾಷ್ಟ್ರ ನಾಯಕರು ರಾಜಕೀಯಕ್ಕೆ ನಮ್ಮ ಮಾತೃಭಾಷೆಯನ್ನೇ ಬಳಸುತ್ತಿದ್ದಾರೆ. ದೊಡ್ಡ ದೊಡ್ಡ ನಾಯಕರ ಹೆಸರುಗಳನ್ನು ಭಾಷಣದಲ್ಲಿ ಹೇಳಿದರೆ ಮತ ಸಿಗುವುದಿಲ್ಲ. ರಾಜ್ಯಕ್ಕೆ ಏನು ಕೂಡುಗೆ ನೀಡಿದ್ದೇವೆ ಎನ್ನುವುದನ್ನು ತಿಳಿಯಬೇಕು.
ರಾಜ್ಯದಲ್ಲಿ ಕುಮಾರಸ್ವಾಮಿಯವರ ಕುಮಾರಪರ್ವ ಕಾರ್ಯಕ್ರಮ ಯಶಸ್ವಿಯಾಗಿದೆ. ರಾಜ್ಯದ 65 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದ್ದಾರೆ. ಜೆಡಿಎಸ್ ಪಕ್ಷ ಜನರ ಬಳಿ ಹೋಗಿ ಪ್ರಣಾಳಿಕೆಯನ್ನು ತಯಾರಿಸಲಾಗುತ್ತದೆ. ಏ.5ರಂದು ಕುಮಾರಸ್ವಾಮಿ ಅವರು ಶಿಕಾರಿಪುರಕ್ಕೆ ಆಗಮಿಸಲಿದ್ದಾರೆ. ಅಂದು ಬೆ.10.3೦ಕ್ಕೆ ಕುಮಾರಪರ್ವ ಕಾರ್ಯಕ್ರದಲ್ಲಿ ಪಾಲ್ಗೊಂಡು, ಬಳಿಕ ಹೀರೆಕೆರೂರಿಗೆ ತೆರೆಳಲಿದ್ದಾರೆ ಎಂದು ತಿಳಿಸಿದರು.ಕೇಂದ್ರ ಬಿಜೆಪಿ ನಾಯಕರ ಲಾಭಿಗಳು ಬಹಳಷ್ಟಿವೆ. ಇತ್ತೀಚೆಗೆ ಮಲೆನಾಡಿಗರಿಗೆ ಆತಂಕ ಮೂಡಿಸಿದ ಕಾಳು ಮೆಣಸಿನ ದರ ಕುಸಿತದ ಹಿಂದೆ ಇದೇ ಬಿಜೆಪಿ ಮುಖಂಡರ ಕೈವಾಡ ಇದೆ. ಓರ್ವ ಮುಖಂಡನ ಮಗ ಕಾಳುಮೆಣಸಿನ ಬೃಹತ್ ವ್ಯಾಪಾರಿಯಾಗಿದ್ದಾನೆ. ಶ್ರೀಲಂಕಾದಿಂದ ಬೃಹತ್ ಪ್ರಮಾಣದ ಕಾಳುಮೆಣಸನ್ನ ಆಮದು ಮಾಡಿಕೊಳ್ಳುತ್ತಿದ್ದಾನೆ. ಮುಂದಿನ ದಿನಗಳಲ್ಲಿ ದಾಖಲೆಯೊಂದಿಗೆ ಬಹಿರಂಗ ಮಾಡುತ್ತೇನೆ ಎಂದರು. ಯಾರೊಂದಿಗೂ ಚುನಾವಣಾ ಮೈತ್ರಿ ಮಾತುಕತೆಯೂ ಇಲ್ಲ ಹಾಗೂ ವರಿಷ್ಟರಿಗೆ ಈ ಕುರಿತು ಆಸಕ್ತಿಯೂ ಇಲ್ಲವೆಂದು ಮಧು ಬಂಗಾರಪ್ಪ ಬಹಳಷ್ಟು ಚರ್ಚೆಗೆ ಕಾರಣವಾದ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಹೇಳಿದರು. ಮೈತ್ರಿ ಬಗ್ಗೆ ಎಚ್.ಡಿ.ಕುಮಾರಸ್ವಾಮಿಯವರಿಗೆ ಆಸಕ್ತಿ ಇಲ್ಲ, ನಮಗೆ ಬಹುಮತ ಬರದಿದ್ದರೆ ಪ್ರತಿಪಕ್ಷದ ಸ್ಥಾನದಲ್ಲಿ ಕೂರುತ್ತೇವೆ ಎಂದು ಸಾವಿರಾರು ಬಾರಿ ಹೇಳಿದ್ದಾರೆ ಎಂದರು.
Comments