ಪೀಕಲಾಟಕ್ಕೆ ಸಿಲುಕಿದ ರೆಬೆಲ್ ಶಾಸಕ ಬಾಲಕೃಷ್ಣ..!!
ಚುನಾವಣ ನೀತಿ ಸಂಹಿತೆ ಜಾರಿಯಾದ ಬಳಿಕ ಬಾಡೂಟ ಹಾಕಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಮಾಜಿ ಶಾಸಕ ಹೆಚ್. ಸಿ .ಬಾಲಕೃಷ್ಣ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ರಾಮನಗರ ತಾಲೂಕಿನ ಬಸವನಪುರ ಗ್ರಾಮದ ಬಳಿ ಇರುವ ಖಾಸಗಿ ರೆಸಾರ್ಟ್‌ನಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್ಟಿ ವಿಭಾಗದ ಮುಖಂಡರ ಸಭೆ ಏರ್ಪಡಿಸಿದ್ದಲ್ಲದೆ ಬೆಂಬಲಿಗರಿಗೆ ಬಾಡೂಟವನ್ನು ತಯಾರಿಸಲಾಗಿತ್ತು.
ಅನುಮತಿ ಪಡೆಯದೆ ಸಭೆ ಆಯೋಜನೆ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 171 ಇ ಹಾಗೂ ಅಬಕಾರಿ ಕಾಯ್ದೆಯಡಿ ಬಾಲಕೃಷ್ಣ ಹಾಗೂ ಅವರ ಪಿಎ ರವಿ, ಹಿಲ್ ವ್ಯೂ ರೇಸಾರ್ಟ್ ಮ್ಯಾನೇಜರ್ ರೆಡ್ಡಿ ಹಾಗೂ ಇತರರ ಮೇಲೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ರಾಮನಗರ ತಹಸೀಲ್ದಾರ್ ಮಾರುತಿ ಪ್ರಸನ್ನ ಹಾಗೂ ರಾಮನಗರ ಗ್ರಾಮಾಂತರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಾರ್ಯಕರ್ತರಿಗಾಗಿ ಮಾಡಲಾಗಿದ್ದ ಮಾಂಸದೂಟ, ಪಾತ್ರೆಗಳು, ಕಾರ್ಯಕರ್ತರಿಗೆ ತಂದಿದ್ದ ಮದ್ಯವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳಿಂದತಿಳಿದು ಬಂದಿದೆ.
Comments