ರೈಲು ಹಳಿ ನಿರ್ವಹಣೆ ದೊಡ್ಡಬಳ್ಳಾಪುರ-ಯಲಹಂಕ ನಡುವೆ 2 ತಿಂಗಳು ಹಲವು ರೈಲುಗಳ ಸಂಚಾರ ವ್ಯತ್ಯಯ





ರೈಲು ಹಳಿ ನಿರ್ವಹಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾ.29ರಿಂದ ದೊಡ್ಡಬಳ್ಳಾಪುರ-ಯಲಹಂಕ ನಡುವೆ 2 ತಿಂಗಳು ಹಲವು ರೈಲುಗಳ ಸಂಚಾರ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಈ ಮಾರ್ಗದಲ್ಲಿ ಸೋಮವಾರ, ಮಂಗಳವಾರ, ಬುಧವಾರ ಮತ್ತು ಶನಿವಾರ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಸಂದರ್ಭದಲ್ಲಿ ರೈಲು ಸಂಚಾರ ವಿಳಂಬವಾಗಲಿದೆ. ಗೋರಖ್ ಪುರ-ಯಶವಂತಪುರ ಎಕ್ಸ್ ಪ್ರೆಸ್ ರೈಲು ಸೋಮವಾರ ದೊಡ್ಡಬಳ್ಳಾಪುರ-ರಾಜಾನುಕುಂಟೆ ನಡುವೆ 35 ನಿಮಿಷ ಮತ್ತು ರಾಜಾನುಕುಂಟೆ-ಯಲಹಂಕ ನಡುವೆ 25 ನಿಮಿಷ ನಿಲ್ಲಲಿದೆ. ನಾಂದೇಡ್-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಪ್ರತಿ ಶನಿವಾರ, ಸೋಮವಾರ, ಬುಧವಾರ ದೊಡ್ಡಬಳ್ಳಾಪುರ-ರಾಜನುಕುಂಟೆ ನಡುವೆ 45 ನಿಮಿಷ ನಿಲ್ಲಲಿದೆ. ರಾಜಾನುಕುಂಟೆ-ಯಲಹಂಕ ನಡುವೆ 35 ನಿಮಿಷ, ಶ್ರೀ ಸಾಯಿನಗರ್ ಶಿರಡಿ- ಚೆನ್ನೈ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲು ಬುಧವಾರ ದೊಡ್ಡಬಳ್ಳಾಪುರ-ರಾಜಾನುಕುಂಟೆ ನಡುವೆ 25 ನಿಮಿಷ ನಿಲ್ಲಲಿದೆ.
ಕಾಚಿಗುಡ-ಯಶವಂತಪುರ ಎಕ್ಸ್ ಪ್ರೆಸ್ ಪ್ರತಿ ಬುಧವಾರ ದೊಡ್ಡಬಳ್ಳಾಪುರ-ರಾಜಾನುಕುಂಟೆ ಮತ್ತು ರಾಜಾನುಕುಂಟೆ-ಯಲಹಂಕ ನಡುವೆ 105 ನಿಮಿಷ ಸಂಚಾರ ಸ್ಥಗಿತವಾಗಲಿದೆ. ಚಿಕ್ಕಬಾಣಾವರ ಸಮೀಪ ಹಳಿ ನಿರ್ವಹಣೆ ಕಾಮಗಾರಿ ಕಾರಣದಿಂದ ಮಾ.29ರಿಂದ ಏ.22ರವರೆಗೆ ಅರಸೀಕೆರೆ-ಕೆಎಸ್ಆರ್ ಬೆಂಗಳೂರು ರೈಲು ಸಂಚಾರ ವಿಳಂಬವಾಗಲಿದೆ. ಇದರಿಂದಾಗಿ ಕೆಎಸ್ಆರ್ ಬೆಂಗಳೂರು-ಮೈಸೂರು ಮ್ಯಾಸೆಂಜರ್ ರೈಲು ಬೆಳಗ್ಗೆ 9.20ರ ಬದಲಾಗಿ 9.50ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಡಲಿದೆ.
Comments