ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಚಿತ್ತ ಜೆಡಿಎಸ್ ನತ್ತ..!!



ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕನ್ನಡ ನಾಡು ನುಡಿ ನೆಲ ಜಲದ ಪರವಾಗಿ ಅವಿರತವಾಗಿ ಹೋರಾಡಿಕೊಂಡು ಬಂದಿರುವ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಸಾ.ರಾ. ಗೋವಿಂದು ಇದೀಗ ರಾಜಕಾರಣದತ್ತ ಹೆಜ್ಜೆ ಹಾಕಿದ್ದಾರೆ.ಆ ನಿಟ್ಟಿನಲ್ಲಿ ಅವರು ಜೆಡಿಎಸ್ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ಧಿ ದಟ್ಟವಾಗಿ ಹರಡಿದೆ.
ಸಾ.ರಾ.ಗೋವಿಂದು ರವರು ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸುವ ಸುದ್ಧಿ ಮೂಲಗಳಿಂದ ತಿಳಿದು ಬಂದಿದೆ.ರಾಜಾಜಿನಗರ ಕನ್ನಡ ಚಳುವಳಿಯ ಇತಿಹಾಸದಲ್ಲಿ ಪ್ರಮುಖವಾದ ಕ್ಷೇತ್ರ ಮಾತ್ರವಲ್ಲ ಇಲ್ಲಿ ಅತಿ ಹೆಚ್ಚು ಕನ್ನಡ ಪರ ಸಂಘಟನೆಗಳು ಇವೆ.ಈ ಕ್ಷೇತ್ರದಲ್ಲಿ ಹಿಂದೆ ಅನೇಕ ಕನ್ನಡ ಪರ ಸಮಾವೇಶಗಳು ಕಾರ್ಯಕ್ರಮಗಳು ನಡೆದಿವೆ.ಕನ್ನಡ ನಾಡು ನುಡಿ ನೆಲ ಜಲಕ್ಕೆ ಕುತ್ತು ಬಂದಾಗ ಮೊದಲು ಎಚ್ಚೆತ್ತು ಪ್ರತಿಭಟಿಸುವ ಕೆಲ ನಗರಗಳಲ್ಲಿ ರಾಜಾಜಿನಗರ ಪ್ರಮುಖವಾದದ್ದು.ಹೋರಾಟಗಳು ಮಾತ್ರವಲ್ಲಾ ಕ್ರೀಡಾ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲೂ ರಾಜಾಜಿನಗರ ಫೇಮಸ್ಸು.ರಾಜಾಜಿನಗರದಲ್ಲಿ ಓಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾ.ರಾ.ಗೋವಿಂದು ರವರೂ ಸಹಾ ಓಕ್ಕಲಿಗ ಬಾಂದವರಾದ್ದರಿಂದ ಅವರಿಗೆ ಈ ವಿಚಾರದಲ್ಲೂ ಪ್ಲೆಸ್ ಆಗಲಿದೆ. ಜಿ.ಟಿ. ಮಾಲ್ ಮತ್ತು ಗಂಗಮ್ಮ ತಿಮ್ಮಯ್ಯ ಟ್ಟಸ್ಟ್ ಸ್ಥಾಪಕರಾದ ಆನಂದ್ ರವರು ಇಲ್ಲಿ ಪಕ್ಷವನ್ನ ಬೆಳೆಸಿದ್ದಾರೆ.ಒಂದು ವೇಳೆ ಸಾ.ರಾ. ಗೋವಿಂದು ರವರು ಜೆಡಿಎಸ್ ನಿಂದ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಿದರೇ ಅವರ ಬೆಂಬಲಕ್ಕೆ ಆನಂದ್ ನಿಲ್ಲುವುದರಲ್ಲಿ ಸಂದೇಶವಿಲ್ಲ.ಈ ಬಗ್ಗೆ ಸಾ.ರಾ. ಗೋವಿಂದು ರವರಿಗೂ ಒಂದು ಕ್ಲ್ಯಾರಿಟಿ ಸಿಕ್ಕಿದೆ ಎಂಬ ಸುದ್ಧಿ ಇದೆ. ಹಾಗಾಗಿ ಸಾ.ರಾ. ಗೋವಿಂದು ರವರು ಜೆಡಿಎಸ್ ಪಕ್ಷದಿಂದ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Comments