ಚಾಮುಂಡೇಶ್ವರಿ ಕ್ಷೇತ್ರದ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಎಚ್ ಡಿಕೆ

ಮೈಸೂರಿನಲ್ಲಿ ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಅವರು, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಿಕಾಸ ಪರ್ವ ಯಾತ್ರೆ ಆರಂಭಿಸಿದ್ದೇನೆ. ಎನ್.ಆರ್. ಕ್ಷೇತ್ರ, ಕೆ.ಆರ್.ಕ್ಷೇತ್ರದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದರು.
ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಟಾರ್ಗೆಟ್ ಮಾಡಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ಜೆಡಿಎಸ್ ಗೆ ಸಿಗಲಿದೆ. ಈ ಭಾರಿ ನಾನು ಮತದಾರನ ಹತ್ತಿರ ಹೋಗುತ್ತಿದ್ದೇನೆ. ಮೈಸೂರು ಜಿಲ್ಲೆಯಲ್ಲಿ 40% ನಗರ ಗ್ರಾಮೀಣ ಪ್ರದೇಶದ ಜನ ಸಿದ್ದರಾಮಯ್ಯ ಗೆ ಉತ್ತರ ಕೊಡ್ತಾರೆ ಎಂದು ತಿಳಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಂತರೆ ಸೋಲು ಗ್ಯಾರಂಟಿ. ಚುನಾವಣೆ ಫಲಿತಾಂಶ ದಿನ ನಾನೇ ಮೈಸೂರಿಗೆ ಬರುತ್ತೇನೆ. ನಿಮ್ಮ ಜೊತೆ ಸಿಎಂ ಸೋತಿರುವ ಬಗ್ಗೆ ಪ್ರತಿಕ್ರಿಯೆ ನೀಡ್ತೇನೆ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು. ಅವರು ಚಾಮುಂಡೇಶ್ಚರಿ ಕ್ಷೇತ್ರಕ್ಕೆ ಬರ್ಲಿ ನೋಡೋಣ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
Comments