ಇತಿಹಾಸ ತಿಳಿದವರಿಂದ ಇತಿಹಾಸ ಅಳಿಸುವ ಕೆಲಸ!



ನಗರಕ್ಕೆ ಹೊಂದಿಕೊಂಡಿರುವ ಇತಿಹಾಸ ಪ್ರಸಿದ್ಧವಾದ ಬಯಲು ಬಸವಣ್ಣ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಿರುವ ಉದ್ಯಾನವನ ಅರುಳು ಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ, ಸ್ಥಳೀಯರು ಮತ್ತು ಬಯಲು ಬಸವಣ್ಣ ಸೇವಾ ಟ್ರಸ್ಟ್ ಸೇರಿಕೊಂಡು ಬಯಲು ಬಸವಣ್ಣ ಉದ್ಯಾನವನ ಅಂತಾ ಇಟ್ಟಿದ್ದರು, ಈ ಹಿಂದೆ ಕೂಡಾ ಇದೇ ವಿಷಯಕ್ಕೆ ಗಲಾಟೆಗಳಾಗಿ ನಗರಸಭೆಯವರು ಇಟ್ಟಿದ್ದ ಹನುಮಂತರಾಯಪ್ಪ ಉದ್ಯಾನವನ ಎಂಬ ನಾಮ ಫಲಕವನ್ನು ಸಾರ್ವಜನಿಕರೇ ಹೊಡೆದು ಉರುಳಿಸಿದ್ದರು. ಇತಿಹಾಸ ಗೊತ್ತಿರೊರು, ಇತಿಹಾಸ ಉಳಿಸುತ್ತೆವೆ ಅಂತ ಕಾರ್ಯಕ್ರಮಗಳಲ್ಲಿ ಗಂಟೆ ಗಟ್ಟಲೆ ಭಾಷಣ ಮಾಡುವ ನಗರ ಸಭೆ ಅಧ್ಯಕ್ಷರಾದ ತಾ.ನ.ಪ್ರಭುದೇವ್ ರವರು ಇತಿಹಾಸವನ್ನು ಅಳಿಸಿ ಬಯಲು ಬಸವಣ್ಣ ಉದ್ಯಾನವನಕ್ಕೆ ಹನುಮಂತರಾಯಪ್ಪನವರ ಹೆಸರು ಇರುವ ಬೋರ್ಡನ್ನು ಇಡಲು ಬಂದಾಗ ಶ್ರೀ ಬಯಲು ಬಸವಣ್ಣ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರು ನಾಗಣ್ಣ ಹಾಗು ಟ್ರಸ್ಟ್ ನ ಸದಸ್ಯರು ಮತ್ತು ಸಾರ್ವಜನಿಕರು ಸೇರಿ ಅದನ್ನು ತಡೆದು ಅವರಿಗೆ ಪ್ರಶ್ನೆ ಮಾಡಿದರು. ಆದರೆ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ತಬ್ಬಿಬ್ಬಾದ ನಗರ ಸಭೆ ಅಧ್ಯಕ್ಷರು ಕೊನೆಗೆ ಬಯಲು ಬಸವಣ್ಣ ಉದ್ಯಾನವನ ಎಂದೇ ಹೇಳಿ ಹೊರಟರು.
ಬಯಲು ಬಸವಣ್ಣ ದೇವಾಲಯದ ಬಳಿ ಇರುವ ಉದ್ಯಾನವನಕ್ಕೆ ಹೆಸರಿಡುವ ಕುರಿತು ಹಿಂದಿನಿಂದಲೂ ಪರ-ವಿರೋಧವಾದಗಳು ನೆಡೆದುಕೊಂಡು ಬಂದಿದ್ದು ಮಂಗಳವಾರ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಉದ್ಯಾನ ವನಕ್ಕೆ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೆಸರಿಡಬೇಕು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗಿತ್ತು, ಆದರೆ ಇದಕ್ಕೆ ಬಸವಣ್ಣ ದೇವಸ್ಥಾನ ಟ್ರಸ್ಟ್ ಮತ್ತು ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಮಂಗಳವಾರ ಬೆಳಿಗ್ಗೆ ಉದ್ಯಾನವನದಲ್ಲಿ ಕಮಾನು ಅಳವಡಿಸಲು ನಗರಸಭೆ ಸಿಬ್ಬಂದಿ ಮುಂದಾದಾಗ ಟ್ರಸ್ಟ್ ಸದಸ್ಯರು ತಡೆದರು, ನಂತರ ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್ ಮತ್ತು ಟ್ರಸ್ಟ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
Comments