ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷರು
ದಿನಾಂಕ 28/3/2018 ರಂದು ವಿಶ್ವಕಂಡ ಅಪರೂಪದ ನಾಯಕರು, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರನ್ನು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದ ಶ್ರೀ ಕೆ.ಎಂ.ಹನುಮಂತರಾಯಪ್ಪರವರು ಭೇಟಿಯಾಗಿ ಇತ್ತೀಚೆಗೆ ಕೇಂದ್ರ ರೇಷ್ಮೆ ಮಂಡಳಿಗೆ 2165 ಕೋಟಿ ರೂಗಳನ್ನು ಬಿಡುಗಡೆ ಮಾಡಿ ರೈತರಿಗೆ ಮತ್ತು ನೇಕಾರರಿಗೆ ಅನುಕೂಲ ಮಾಡಿದ್ದಕ್ಕಾಗಿ ಅಭಿನಂದಿಸಿದರು, ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿ ಕಛೇರಿಯಲ್ಲಿ ಭೇಟಿ ಮಾಡಿ ಶ್ರೀಮಂತರು ನೇರ ತೆರಿಗೆ ಪಾವತಿಸುತ್ತಾರೆ, ಆದರೆ ಈ ವ್ಯಾಪ್ತಿಗೆ ಬರದ ಜನಸಾಮಾನ್ಯರು ತೆರಿಗೆ ಭಾರ ಹೊರುತ್ತಿದ್ದಾರೆ, ಆದ್ದರಿಂದ ಜನರು ಹೆಚ್ಚಾಗಿ ಬಳಸುವ ಸಾಮಗ್ರಿಗಳಿಗೆ ತೆರಿಗೆ ಕಡಿತಗೊಳಿಸಲು ಮನವಿ ಮಾಡಿದರು. ಜಿ.ಎಸ್.ಟಿ.ಯಿಂದ ನೇಕಾರರಿಗೆ ಆಗಿರುವ ಅನಾನುಕೂಲಗಳನ್ನು ವಿವರಿಸಿ ಆದಷ್ಟು ಬೇಗ ಸರಿಪಡಿಸುವಂತೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ನಗರ ಬಿ.ಜೆ.ಪಿ.ಅಧ್ಯಕ್ಷರಾದ ಕೆ.ಹೆಚ್. ರಂಗರಾಜು, ಕಾಸಿಯಾದ ಕೆ.ಬಿ.ಅರಸಪ್ಪ, ಶಶಿಗೌಡ ಉಪಸ್ಥಿತರಿದ್ದರು.
Comments